ʻಆರು ತಿಂಗಳು ಕಠಿಣ ದಿನಗಳನ್ನು ಎದುರಿಸಬೇಕಿದೆ, ಇದೆಲ್ಲದಕ್ಕೂ ಇತಿಶ್ರೀ ಹಾಡಬೇಕುʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚೆಗಷ್ಟೇ ಸಮಂತಾ ತಮ್ಮ ಖುಷಿ ಮತ್ತು ಸಿಟಾಡೆಲ್ ಸಿನಿಮಾದ ಶೂಟಿಂಗ್ ಮುಗಿದ ಬಳಿಕ ಸಿನಿಮಾಗಳಿಂದ ವಿರಾಮ ಘೋಷಿಸಿದ್ದು, ಒಂದು ವರ್ಷಗಳ ಕಾಳ ಸಿನಿಮಾದಿಂದ ದೂರವಿರುವುದಾಗಿ ತಿಳಿಸಿದ್ದಾರೆ. ತಮ್ಮ ಆರೋಗ್ಯದ ಕಡೆ ಗಮನಹರಿಸಲು ಚಿತ್ರಗಳಿಂದ ಬಿಡುವು ಮಾಡಿಕೊಂಡಿದ್ದಾಗಿ ಸಮಂತಾ ಅಭಿಮಾನಿಗಳಿಗೆ ಹೇಳಿದರು.

ಈ ಹಿಂದೆ ಮಯೋಸಿಟಿಸ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ತೆಗೆದುಕೊಂಡಿದ್ದೆ. ಕೆಲ ವರ್ಷಗಳ ಹಿಂದೆ ಚಿಕಿತ್ಸೆಗಾಗಿ ಆರು ತಿಂಗಳ ಕಾಲ ಶೂಟಿಂಗ್‌ನಿಂದ ದೂರ ಉಳಿದಿದ್ದರು. ಔಷಧಿಗಳ ಜೊತೆಗೆ ಕೇರಳ ಆಯುರ್ವೇದವನ್ನೂ ಸಮಂತಾ ಬಳಸಿದ್ದಾರೆಂದು ವರದಿಯಾಗಿದೆ. ಆದರೆ ಸಮಂತಾ ಆಪ್ತರು ಹೇಳುವ ಪ್ರಕಾರ ಸಮಂತಾ ಅವರ ಮೈಯೋಸಿಟಿಸ್ ಇನ್ನೂ ಕಡಿಮೆಯಾಗಿಲ್ಲ ಹೀಗೆ ತೋರುತ್ತದೆ ಮಯೋಸಿಟಿಸ್ ಸಂಪೂರ್ಣವಾಗಿ ಕಡಿಮೆಯಾಗಿಲ್ಲ, ಇನ್ನೂ ನರಳುತ್ತಿದ್ದಾರೆ ಎಂದು ಆಪ್ತರು ಹೇಳಿದ್ದಾರೆ. ಈ ಚಿಕಿತ್ಸೆಗಾಗಿ ಸಮಂತಾ ಶೀಘ್ರದಲ್ಲೇ ಅಮೆರಿಕಕ್ಕೆ ತೆರಳಲಿದ್ದಾರೆ. ಸಮಂತಾ ಕೆಲವು ತಿಂಗಳುಗಳ ಕಾಲ ಅಮೆರಿಕದಲ್ಲೇ ಇದ್ದು ಮಯೋಸಿಟಿಸ್ ಗೆ ಸಂಪೂರ್ಣ ಚಿಕಿತ್ಸೆ ಪಡೆಯಲಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಸಮಂತಾ ಮತ್ತೆ ಭಾರತಕ್ಕೆ ಬರಲಿದ್ದಾರೆ.

ಸಮಂತಾ ಅವರ ಇತ್ತೀಚಿನ ಪೋಸ್ಟ್‌ಗಳನ್ನು ನೋಡಿದರೆ ಇದು ನಿಜ ಎನಿಸುತ್ತದೆ. ಇನ್ನು ಮೂರು ದಿನಗಳಲ್ಲಿ ಕಾರವಾನ್ ಲೈಫ್ ಶುರುವಾಗಲಿದೆ ಎಂದು ಸಮಂತಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಮತ್ತೊಂದು ಸ್ಟೋರಿಯಲ್ಲಿ ತನ್ನ ಫೋಟೋವನ್ನು ಹಂಚಿಕೊಂಡಿರುವ ಅವರು, ಈ ಆರು ತಿಂಗಳು ತುಂಬಾ ಕಷ್ಟ ಮತ್ತು ದೀರ್ಘ ದಿನಗಳು, ಹೇಗಾದರೂ ಕೊನೆಗೊಳಿಸಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಎಷ್ಟೇ ಕಷ್ಟ ಬಂದರೂ ಈ ಬಾರಿ ಅದಕ್ಕೊಂದು ಅಂತ್ಯ ನೀಡಲು ಸಮಂತಾ ಫಿಕ್ಸ್ ಆಗಿದ್ದಾರಂತೆ. ಅಭಿಮಾನಿಗಳು, ಮತ್ತು ಸೆಲೆಬ್ರಿಟಿಗಳು ಸಮಂತಾ ಶೀಘ್ರವಾಗಿ ಚೇತರಿಸಿಕೊಂಡು ಮತ್ತೆ ಚಲನಚಿತ್ರಗಳನ್ನು ಮಾಡಬೇಕೆಂದು ಹರಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!