CINE| ಆಕಾಶ, ನೀರು, ಭೂಮಿ ನಡುವೆ ಸಮಂತಾ: ಸಖತ್‌ ಎಂಜಾಯ್‌ ಮೂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮಂತಾ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ವಿರಾಮ ಘೋಷಿಸಿದ್ದು, ಮಯೋಸಿಟಿಸ್ ಚಿಕಿತ್ಸೆಗಾಗಿ ಮತ್ತೆ ವಿದೇಶದತ್ತ ಮುಖ ಮಾಡಿದ್ದಾರೆ. ಇದಕ್ಕೂ ಮುನ್ನ ಸ್ವಲ್ಪ ಗ್ಯಾಪ್‌ ತೆಗೆದುಕೊಂಡು, ಬಾಲಿಯಲ್ಲಿ ಸಖತ್‌ ಎಂಜಾಯ್‌ ಮೂಡ್‌ನಲ್ಲಿರುವ ಸಮಂತಾ, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಕಳೆದ ಎರಡು ದಿನಗಳಿಂದ ಇಂಡೋನೇಷ್ಯಾದ ಬಾಲಿಯಲ್ಲಿ ಸಮಂತಾ ತನ್ನ ಸ್ನೇಹಿತೆಯೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ. ಬಾಲಿಯಲ್ಲಿ ಎಲ್ಲಾ ಮೋಜಿನ ಸ್ಥಳಗಳಿಗೆ ಭೇಟಿ ಕೊಟ್ಟು ಸಖತ್‌ ಚಿಲ್‌ ಆಗುತ್ತಿದ್ದಾರೆ. ಬಾಲಿಯ ಅನೇಕ ದೇವಾಲಯಗಳು ಮತ್ತು ನೈಸರ್ಗಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ ಮತ್ತು ಆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ಬಾಲಿಯಲ್ಲಿ ಮಣ್ಣು, ನೀರು, ಆಕಾಶ ಒಂದೇ ಜಾಗದಲ್ಲಿ ಇರುವಂತೆ ಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ವೈದ್ಯಕೀಯ ವಿಧಾನಗಳ ಬದಲಿಗೆ ಪ್ರಕೃತಿಯ ಮಡಲಿಲ್ಲಿ ಗುಣಮುಖರಾಗಲು ಪ್ರಯತ್ನಿಸುತ್ತಿದ್ದಾರೆ ಎಂಬ ಕಮೆಂಟ್‌ಗಳು ಹರಿದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!