ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಚೈತನ್ಯರೊಂದಿಗೆ ವಿಚ್ಛೇದನದ ಬಳಿಕ ಸ್ಯಾಮ್ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಟ್‌ಲುಕ್ ಪೋಟೋ ಶೂಟ್, ಐಟಂ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಟ್ರೋಲಿಗರಿಗೆ ಟಾಂಗ್ ನೀಡುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಆಕ್ಟೀವ್ ಆಗಿದ್ದಾರೆ. ಇದೀಗ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಮಂತಾ ಮಾಡಿರುವ ಪೋಸ್ಟ್ ಸಿನಿ ರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಆಕೆ ಮಾಡಿರುವ ಸೀರಿಯಸ್ ಟ್ವೀಟ್ ಯಾರಿಗೆ ಎಂದು ತಿಳಿಯದೆ ಫ್ಯಾನ್ಸ್ ತಲೆ ಕೆರೆದುಕೊಳ್ಳುತ್ತಿದ್ದಾರೆ.
ʻನನ್ನ ಮೌನವನ್ನು ಕೈಲಾಗಿದ ಗುಣ ಎಂದು, ನನ್ನ ಶಾಂತತೆ ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದೇನೆ, ನನ್ನ ದಯೆ ದೌರ್ಬಲ್ಯ ಎಂದು ಭಾವಿಸಬೇಡಿ. ಎಲ್ಲದಕ್ಕೂ ಒಂದು ಅಂತಿಮ ದಿನ ಇರುತ್ತದೆʼ. ಎಂದು ಸೀರಿಯಸ್ ಟ್ವೀಟ್ ಮಾಡಿದ್ದಾರೆ.
Kindness can have an expiry date ☺️#JustSaying https://t.co/UDc40uaLpv
— Samantha (@Samanthaprabhu2) April 22, 2022
ಇದೀಗ ಸಮಂತಾ ಮಾಡಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಟ್ವೀಟ್ ಯಾರಿಗಾಗಿ ಮಾಡಿದ್ದು, ಮತ್ತೆ ಯಾರಾದರೂ ಟ್ರೋಲ್ ಮಾಡಿದ್ದಾರಾ? ಎಂದು ನೆಟ್ಟಿಗರು ಗೊಂದಲಕ್ಕೊಳಗಾಗಿದ್ದಾರೆ.