ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಳ ಗ್ಯಾಪ್ ನಂತರ ಇತ್ತೀಚೆಗಷ್ಟೇ ಯಶೋದಾ ಚಿತ್ರದ ಮೂಲಕ ಸಮಂತಾ ಮತ್ತೆ ಬಂದು ಪ್ರೇಕ್ಷಕರ ಮನಗೆದ್ದಿದ್ದಾರೆ. ಯಶೋದಾ ಲೇಡಿ ಓರಿಯೆಂಟೆಡ್ ಚಿತ್ರವಾಗಿದ್ದು, ನವೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. 40 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಭರ್ಜರಿ ಯಶಸ್ಸು ಕಂಡಿದೆ. ಈ ಸಿನಿಮಾದ ಸಮಯದಲ್ಲಿ ಸಮಂತಾ ಅವರಿಗೆ ಮಯೋಸಿಟಿಸ್ ಇರುವುದರ ಬಗ್ಗೆ ಹೇಳಿಕೊಂಡಿದ್ದರು.
ಸದ್ಯ ಸಮಂತಾ ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು, ಪ್ರೇಕ್ಷಕರು ಮತ್ತು ಅನೇಕ ಸೆಲೆಬ್ರಿಟಿಗಳು ಸಮಂತಾ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಇದದೀಗ ಸಮಂತಾ ಅವರ ಮುಂದಿನ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಪುರಾಣದಲ್ಲಿನ ದುಷ್ಯಂತು-ಶಕುಂತಲೆಯ ಕಥೆಯನ್ನು ಆಧರಿಸಿ ಶಾಕುಂತಲಂ ಎಂಬ ಶೀರ್ಷಿಕೆಯಲ್ಲಿ ಸಮಂತಾ ಮುಖ್ಯ ನಾಯಕಿಯಾಗಿ ಸಿನಿಮಾ ಬರಲಿದೆ.
ಈ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇದರಲ್ಲಿ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಶಕುಂತಲಾ ಮಗುವಿನ ಪಾತ್ರದಲ್ಲಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ. ದುಶ್ಯಂತ ಪಾತ್ರದಲ್ಲಿ ಮಲಯಾಳಂ ನಟ ದೇವ್ ಮೋಹನ್ ನಟಿಸುತ್ತಿದ್ದಾರೆ. ಶಾಕುಂತಲಂ ಫೆಬ್ರವರಿ 17, 2023 ರಂದು ಚಿತ್ರವು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಥಿಯೇಟರ್‌ಗಳಲ್ಲಿ 3ಡಿಯಲ್ಲಿ ಬಿಡುಗಡೆಯಾಗಲಿದೆ. ಅಭಿಮಾನಿಗಳು ಶೀಘ್ರದಲ್ಲೇ ಸಮಂತಾ ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಎದುರು ನೋಡುತ್ತಿದ್ದಾರೆ.