ಮರಳು ಲಾರಿ ಹರಿದು ವಿದ್ಯಾರ್ಥಿ ಸಾವು

ಹೊಸದಿಗಂತ ವರದಿ, ಹೊನ್ನಾವರ:

ಮರಳಿನ ಸೈಟ್ ನಲ್ಲಿ ಮರಳುನ್ನು ಲಾರಿಗೆ ತುಂಬುವ ಕೆಲಸಕ್ಕೆಂದು ಹೋದ ಕಾಲೇಜ್ ವಿದ್ಯಾರ್ಥಿ ಮರಳು ತುಂಬಲು ಬಂದ ಲಾರಿ ಹಾಯ್ದು ಮತೃ ಪಟ್ಟ ಘಟನೆ ಕರಿಕುರ್ವಾ ಶರಾವತಿ ನದಿತೀರದ ಮರಳು ಸೈಟ್ ನಲ್ಲಿ ಜರುಗಿದೆ.

ಮತೃಪಟ್ಟ ವಿದ್ಯಾರ್ಥಿ ದರ್ಶನ ಸುಭ್ರಾಯ ಗೌಡ (19)ಬಾನಗದ್ದೆ ಹಡಿನಬಾಳ ನಿವಾಸಿಯಾಗಿದ್ದಾನೆ.

ಈತ ತನ್ನ ಗೆಳೆಯರೊಂದಿಗೆ ತಾಲೂಕಿನ ಕರಿಕುರ್ವಾ ಶರಾವತಿ ನದಿ ದಂಡೆಯಲ್ಲಿರುವ ಮಂಜುನಾಥ ನಾರಾಯಣ ಗೌಡ ಇವರ ಮರಳಿನ ಸೈಟ್ ನಲ್ಲಿ ಮರಳುನ್ನು ಲಾರಿಗೆ ತುಂಬುವ ಕೆಲಸಕ್ಕೆ ಫಿರ್ಯಾದಿ ಹಾಗೂ ಆತನ ಗೆಳೆಯರಾದ ದರ್ಶನ ಸುಬ್ರಾಯ ಗೌಡ,ಜಯಂತ ಕನ್ಯಾ ಗೌಡ,ರಾಘವ ಮರಿ ಗೌಡ, ಸೇರಿ ಹೋಗಿದ್ದೇವು. ನಾವು ಕೆಲಸಕ್ಕೆ ಹೋಗಿದ್ದ ಮರಳು ಸೈಟ್ ಗೆ ಬಂದ ಎರಡು ಲಾರಿಗಳಿಗೆ ಮರಳು ತುಂಬಿದ ಮೇಲೆ ನಾನು ಜಯಂತ, ರಾಘವ ಸನಿಹದಲ್ಲಿರುವ ಕಟ್ಟೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದರು. ಮೃತ ದರ್ಶನ ಅಲ್ಲೇ ಪೋನ್ ನಲ್ಲಿ ಮಾತನಾಡುತ್ತಿದ್ದ ರಾತ್ರಿ 10.15 ರ ಸುಮಾರಿಗೆ ಬಂದ ಟಿಪ್ಪರ್ ಚಲಾಯಿಸಿಕೊಂಡು ಬಂದ ಚಾಲಕ ಸೈಟ್ ಬಳಗೆ ವೇಗವಾಗಿ ಬಂದು ಪೋನ್ ನಲ್ಲಿ ಮಾತನಾಡುತ್ತಿದ್ದ ದರ್ಶನನಿಗೆ ಎದುರಿನಿಂದ ಡಿಕ್ಕಿ ಪಡಿಸಿ ಲಾರಿ ಮುಂದಕ್ಕೆ ಚಲಿಸಿ ನಿಲ್ಲಿಸಿದನು.

ಕೊಡಲೆ ನನ್ನ ಜೊತೆಯಲ್ಲಿದ್ದ ಗೆಳೆಯರು ಸೇರಿ ಉಪಚರಿಸಿದ್ದು ದರ್ಶನನಿಗೆ ತಲೆ,ಎಡಗಾಲಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮತೃಪಟ್ಟನು ಎನ್ನಲಾಗಿದೆ. ಅಪಘಾತ ಪಡಿಸಿದ ಟಿಪ್ಪರ್ ಕೆ.ಎ-19/ಎ.ಡಿ5898 ಇದರ ಚಾಲಕ ಅರೋಪಿ ಮಾರುತಿ ಗೌಡ ಕೇರಿಮನೆ,ಮಾವಿನಕುರ್ವಾ ಎಂದು ತಿಳಿಯಲಾಗಿದೆ.ಇತನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿನ ಮಾದೇವ ಗೌಡ ಮರಬಳ್ಳಿ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.ಪ್ರಕರಣ ದಾಖಲಿಸಿ ಕೊಂಡ ಪೋಲಿಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!