ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೆಕ್ ಬೌನ್ಸ್ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ನಟ ನಿನಾಸಂ ಅಶ್ವತ್ಥ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಹಾಸನ ಮೂಲದ ರೋಹಿತ್ ಎಂಬುವವರಿಂದ ಹಸು ಖರೀದಿಸಿದ್ದ ಅಶ್ವಥ್, 1.5 ಲಕ್ಷದ ಚೆಕ್ ನೀಡಿದ್ದರು. ಆದರೆ ಬ್ಯಾಂಕ್ಗೆ ಹಾಕಿದಾಗ ಅಶ್ವಥ್ ನೀಡಿದ್ದ ಚೆಕ್ ಬೌನ್ಸ್ ಆಗಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ರೋಹಿತ್ ಹಾಸನದ ಜೆಎಮ್ಎಫ್ಸಿ ಕೋರ್ಟ್ನಲ್ಲಿ ದೂರು ದಾಖಲಿಸಿದ್ದರು. ಅರೆಸ್ಟ್ ವಾರಂಟ್ ಅನ್ನು ಕೋರ್ಟ್ ಹೊರಡಿಸಿದರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ.
ನಾಲ್ಕೂ ಬಾರಿಯೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆ ಐದನೇ ಬಾರಿಗೆ ಹಾಸನ ಬಡಾವಣೆ ಠಾಣೆ ಪೊಲೀಸರು ನಟನನ್ನು ಬಂಧಿಸಿದ್ದಾರೆ. ನಿನ್ನೆ ರಾತ್ರಿ ಬಂಧಿಸಿ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದರು.
ನ್ಯಾಯಾಧೀಶರ ಮುಂದೆ ನಿನಾಸಂ ಅಶ್ವಥ್ ತಪ್ಪೊಪ್ಪಿಕೊಂಡಿದ್ದು ಶೇ.25 ರಷ್ಟು ಹಣ ಪಾವತಿಸಿದ್ದಾರೆ. ಇನ್ನುಳಿದ ಹಣ ಶೀಘ್ರದಲ್ಲೇ ನೀಡುವುದಾಗಿ ಹೇಳಿದ್ದಾರೆ. ಶೇಕಡಾ 25 ರಷ್ಟು ಹಣ ಪಾವತಿ ಮಾಡಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಅಶ್ವಥ್ ಬಿಡುಗಡೆ ಮಾಡಲಾಗಿದೆ.