ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಹಾಗೂ ವಿತರಕ ಸ್ವಾಗತ್ ಬಾಬು ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ 35 ವರ್ಷಗಳ ಕಾಲ ಸುದೀರ್ಘ ಅನುಭವ ಹೊಂದಿದ್ದ ಇವರಿಂದು ಕೊನೆಯುಸಿರೆಳೆದಿದ್ದಾರೆ. ಇವರ ಸಾವಿಗೆ ಅನೇಕ ತಾರೆಯರು ಕಂಬನಿ ಸುರಿಸಿದ್ದಾರೆ.
ಸ್ವಾಗತ್ ಬಾಬು ಕನ್ನಡದಲ್ಲಿ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ನಿರ್ಮಾಪಕ ಮತ್ತು ವಿತರಕರಾಗಿಯು ಕೆಲಸ ಮಾಡಿದ್ದಾರೆ. ಇವರ ‘ಚಂದ್ರಮುಖಿ ಪ್ರಾಣ ಸಖಿ’, ‘ಶ್ರೀರಸ್ತು ಶುಭಮಸ್ತು’ ಸಿನಿಮಾಗಳು ಹಿಟ್ ಆಗಿದ್ದವು.
ಚಿತ್ರರಂಗದ ದಿಗ್ಗಜರು ಸ್ವಾಗತ್ ಬಾಬು ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.