ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಕ್ರಿಕೆಟಿಗ ಶೋಯಬ್ ಮಲಿಕ್ ಮದುವೆ ಮುರಿದುಬಿದ್ದಿದೆ.
ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ಬೇರೆಯಾಗಲಿದೆ ಎನ್ನುವ ಸುದ್ದಿ ಹರಿದಾಡಿತ್ತು. ಇದೀಗ ಶೋಯಬ್ ಮಲಿಕ್ ಪಾಕಿಸ್ತಾನಿ ನಟಿಯ ಜೊತೆ ಮದುವೆಯಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಡಿವೋರ್ಸ್ ಹಿಂಟ್ ನೀಡುವ ಪೋಸ್ಟ್ ಮಾಡಿದ್ದ ಶೋಯಬ್ ಇಂದು ನಟಿ ಸನಾ ಜಾವೇದ್ ಜೊತೆಗಿನ ಮದುವೆ ಫೋಟೊ ಹಂಚಿಕೊಂಡಿದ್ದಾರೆ. ಸಾನಿಯಾ ಹಾಗೂ ಶೋಯಬ್ ಮದುವೆ ಮುರಿಯಲು ಶೋಯಬ್ ನಟಿಯೊಂದಿಗೆ ಡೇಟಿಂಗ್‌ನಲ್ಲಿರುವುದೇ ಕಾರಣ ಎಂದು ಹೇಳಲಾಗಿತ್ತು.
ಅಂತೆಯೇ ಶೋಯಬ್ ನಟಿ ಸನಾ ಜೊತೆ ನಿಖಾ ಮಾಡಿಕೊಂಡಿದ್ದಾರೆ. ವಿಚ್ಛೇದನದ ಸುದ್ದಿಯನ್ನೇ ಬಿಟ್ಟುಕೊಡದೆ ಸನಾ ಜೊತೆ ಮದುವೆಯ ಪೋಸ್ಟ್ ಮಾಡಿದ ಶೋಯಬ್ ಅಭಿಮಾನಿಗಳು ಶಾಕ್ ಆಗಿದ್ದಾರೆ.
14 ವರ್ಷಗಳ ದಾಂಪತ್ಯ ಅಂತ್ಯವಾಗಿದ್ದು, ಸಾನಿಯಾ ಫ್ಯಾನ್ಸ್‌ಗೆ ಕೂಡ ಬೇಸರ ತಂದಿದೆ.