ಪಿಕು ಎಂದು ಟ್ಯಾಟೂ ಹಾಕಿಸಿಕೊಂಡ ಸಾನ್ವಿ ಸುದೀಪ್‌, ಏನಿದರ ಅರ್ಥ ಅಂತಿದ್ದಾರೆ ಫ್ಯಾನ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುವ ಸಾನ್ವಿ ಇದೀಗ ಟಾಟ್ಯೂವೊಂದನ್ನು ಹಾಕಿಸಿಕೊಂಡು ಟ್ರೆಂಡಿಂಗ್​ನಲ್ಲಿ ಇದ್ದಾರೆ.

ಸುದೀಪ್​ ಪುತ್ರಿ ಸಾನ್ವಿ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ವಿಡಿಯೋದಲ್ಲಿ ಸಾನ್ವಿ ಅವರು ಹೊಸ ಟಾಟ್ಯೂವೊಂದನ್ನು ಹಾಕಿಸಿಕೊಂಡಿದ್ದಾರೆ. ಹೌದು, ಇದೇ ಟಾಟ್ಯೂ ನೋಡಿದ ಅಭಿಮಾನಿಗಳು ಏನಿದು ಅಂತ ತಲೆ ಕರೆಸಿಕೊಂಡಿದ್ದಾರೆ. ಸಾನ್ವಿ ಸುದೀಪ್​ ಅವರು ಕತ್ತಿನಲ್ಲಿ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರೆ.

ಕಿಚ್ಚ ಸುದೀಪ್ ಅವರ ತಂದೆ ಸಂಜೀವ್ ಮಂಜಪ್ಪ ಅವರು ಸಾನ್ವಿಯನ್ನು ಪ್ರೀತಿಯಿಂದ ಪೀಕು ಅಂತ ಕರೆಯುತ್ತಾರಂತೆ. ಹೀಗಾಗಿ ಅದೇ ಹೆಸರನ್ನು ಸಾನ್ವಿ ಅವರು ತಮ್ಮ ಕತ್ತಿನ ಮೇಲೆ PIKU ಅಂತ ಟಾಟ್ಯೂ ಹಾಕಿಸಿಕೊಂಡಿದ್ದಾರಂತೆ. ಕೆಲವರು ಸಾನ್ವಿ ಪೀಕು ಸಿನಿಮಾ ಫ್ಯಾನ್‌ ಅಥವಾ ದೀಪಿಕಾ ಕ್ಯಾರೆಕ್ಟರ್‌ ಇಷ್ಟಪಟ್ಟು ಪೀಕು ಎಂದು ಹಾಕಿಸಿಕೊಂಡಿದ್ದಾರೆ ಎಂದೂ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!