ಸರಸ್ವತಿ ವೈದ್ಯ ಕೊಲೆ ಪ್ರಕರಣ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಆರೋಪಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮುಂಬೈನ ಮೀರಾ ರೋಡ್ ಪ್ರದೇಶದಲ್ಲಿ ನಡೆದ ಸರಸ್ವತಿ ವೈದ್ಯ ಕೊಲೆ ಪ್ರಕರಣ ಇಡೀ ನಗರವನ್ನೆ ಬೆಚ್ಚಿ ಬೀಳಿಸಿತ್ತು.
ಆರೋಪಿಯಿಂದ ವಿವಿಧ ವಿಚಾರಗಳು ಹೊರಬರುತ್ತಿದೆ.

ಶ್ರದ್ಧಾ ಕೊಲೆ ಪ್ರಕರಣ ದಿಂದ ಸ್ಫೂರ್ತಿ ಪಡೆದು ಸರಸ್ವತಿ ವೈದ್ಯರ ದೇಹವನ್ನು ತುಂಡರಿಸಿರುವುದಾಗಿ ಆರೋಪಿ ಮನೋಜ್​ ಸಾನೆ ಪೊಲೀಸ್​ ವಿಚಾರಣೆ ವೇಳೆ ಹೇಳಿದ್ದಾನೆ ಎಂದು ವರದಿಯಾಗಿದೆ.

ಜೂನ್ 3 ರಂದು ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬಳಿಕ ತನ್ನ ಮೇಲೆ ಕೊಲೆ ಆರೋಪ ಬರುತ್ತದೆ ಎಂಬ ಭಯದಿಂದ ದೇಹವನ್ನು ತುಂಡರಿಸಿ ಪ್ರೆಶರ್​ ಕುಕ್ಕರ್​ನಲ್ಲಿ ಬೇಯಿಸಿ ಶವವನ್ನು ವಿಲೇವಾರಿ ಮಾಡಿರುವುದಾಗಿ ಆರೋಪಿ ಮನೋಜ್​ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೇ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದಿಂದ ಸ್ಫೂರ್ತಿ ಪಡೆದು ದೇಹವನ್ನು ತುಂಡರಿಸಿದ್ದಾಗಿಯೂ ಆರೋಪಿ ಹೇಳಿದ್ದಾನಂತೆ.

ಮನೋಜ್​ ಹೇಳಿಕೆಯಿಂದ ಪೊಲೀಸರು ಸರಸ್ವತಿ ಅವರದ್ದು ಆತ್ಮಹತ್ಯೆಯ ಅಥವಾ ಕೊಲೆಯೋ ಎಂದು ತನಿಖೆ ನಡೆಸುತ್ತಿದ್ದಾರೆ. ಗುರುವಾರದಂದು ಸರಸ್ವತಿ ಅವರನ್ನು ಕೊಂದು ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಸಾನೆ ಪ್ರಯತ್ನಿಸಿದ್ದ. ಇದೀಗ ಸರಸ್ವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಪೊಲೀಸರ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಸರಸ್ವತಿ ವೈದ್ಯ ಅವರ ಸಹೋದರಿ ಸಹ ನಯಾ ನಗರ ಪೊಲೀಸ್ ಠಾಣೆಗೆ ಬಂದಿದ್ದರು. ಇದೇ ವೇಳೆ, ಮನೋಜ್ ಸಾನೆ ಅವರನ್ನು ಪೊಲೀಸರು ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ಆರೋಪಿಯನ್ನು ನಯಾ ನಗರ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ವಿಚಾರಣೆ ನಡೆಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!