ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಉಕ್ಕಿನ ಮನುಷ್ಯ ಸದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ. ಗುಜರಾತಿನ ಏಕ್ತಾ ನಗರದಲ್ಲಿ ನಿರ್ಮಿಸಲಾಗಿರುವ ಏಕತಾ ಪ್ರತಿಮೆ ಬಳಿ ಗಣರಾಜ್ಯೋತ್ಸವ ಮಾದರಿಯ ಪರೇಡ್ ನಡೆದಿದೆ.
ರಾಷ್ಟ್ರೀಯ ಏಕತಾ ದಿವಸ್ ಎಂಬ ಈ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಗಣರಾಜ್ಯೋತ್ಸವದ ಮೆರವಣಿಗೆಯ ಮಾದರಿಯಲ್ಲಿ ವಿವಿಧ ರಾಜ್ಯಗಳು ಮತ್ತು ಕೇಂದ್ರ ಪೊಲೀಸ್ ಪಡೆಗಳ ತುಕಡಿಗಳು ಭಾಗವಹಿಸಿವೆ.
ಹತ್ತು ರಾಜ್ಯಗಳ ಟ್ಯಾಬ್ಲೋಗಳು, ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಫ್ಲೈ-ಪಾಸ್ಟ್ ಮತ್ತು ಮಹಿಳಾ ನೇತೃತ್ವದ ತುಕಡಿಗಳು ಪ್ರಮುಖ ಪಾತ್ರ ವಹಿಸಿವೆ.ನವೆಂಬರ್ 1 ರಿಂದ 15 ರವರೆಗೆ ಭಾರತ್ ಪರ್ವ್ ಮತ್ತು ಭಾರತದ ಉಕ್ಕಿನ ಮನುಷ್ಯನನ್ನು ಗೌರವಿಸಲು ಪಾದಯಾತ್ರೆಗಳೊಂದಿಗೆ ಉತ್ಸವಗಳು ಮುಂದುವರೆಯಲಿವೆ.

