ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿ.
ಈ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ಅ ವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅವರ ಆದರ್ಶ ಕಾರ್ಯವು ಬಲಿಷ್ಠ ಮತ್ತು ಹೆಚ್ಚು ಏಕತೆಯ ದೇಶವನ್ನು ನಿರ್ಮಿಸಲು ನಮಗೆ ಮಾರ್ಗದರ್ಶನ ನೀಡುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾನ್ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಅವರ ಪುಣ್ಯ ತಿಥಿಯಂದು ನನ್ನ ನಮನಗಳು. ಅವರ ದೂರದೃಷ್ಟಿಯ ನಾಯಕತ್ವ ಮತ್ತು ರಾಷ್ಟ್ರದ ಏಕತೆಗೆ ಅಚಲವಾದ ಬದ್ಧತೆಯು ಆಧುನಿಕ ಭಾರತದ ಅಡಿಪಾಯವನ್ನು ಹಾಕಿತು.ಅವರ ಅನುಕರಣೀಯ ಕೆಲಸವು ನಮಗೆ ಬಲಿಷ್ಠ, ಹೆಚ್ಚು ಒಗ್ಗಟ್ಟಿನ ದೇಶವನ್ನು ನಿರ್ಮಿಸುವತ್ತ ಮಾರ್ಗದರ್ಶನ ನೀಡುತ್ತದೆ. ನಾವು ಅವರ ಜೀವನದಿಂದ ಸ್ಫೂರ್ತಿಯನ್ನು ಪಡೆಯುವುದನ್ನು ಮುಂದುವರಿಸುತ್ತೇವೆ ಮತ್ತು ಅವರ ಸಮೃದ್ಧ ಭಾರತದ ಕನಸನ್ನು ನನಸಾಗಿಸಲು ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.