ನಟ ಸಾರ್ವಭೌಮ ಬಳ್ಳಾರಿ ರಾಘವ ಜಯಂತ್ತ್ಯುತ್ಸವ, ವಿಪ್ರ ಸಂಘಟನೆಯಿಂದ ಪುತ್ಥಳಿಗೆ ಪುಷ್ಪಾರ್ಚನೆ

ಹೊಸದಿಗಂತ ವರದಿ ಬಳ್ಳಾರಿ:

ನಟ ಸಾರ್ವಭೌಮ, ಕಲಾ ಪ್ರಪೂರ್ಣ ಬಳ್ಳಾರಿ ರಾಘವರ ಜಯಂತ್ತ್ಯುತ್ಸವ ನಿಮಿತ್ತ ಬಳ್ಳಾರಿ ಬ್ರಾಹ್ಮಣ ಒಕ್ಕೂಟ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ನಗರದ ಗಡಗಿ ಚೆನ್ನಪ್ಪ ವೃತ್ತದ ಬಳಿಯ ಶ್ರೀ ರಾಘವರ ಪುತ್ಥಳಿಗೆ ಬುಧವಾರ ಪುಷ್ಪಾರ್ಚನೆಗಳನ್ನು ಸಲ್ಲಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಬ್ರಾಹ್ಮಣ ಒಕ್ಕೂಟ ಅಧ್ಯಕ್ಷ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ ಆರ್. ಪ್ರಕಾಶ್ ರಾವ್ ಅವರು ಪುಷ್ಪಾರ್ಚನೆಗಳನ್ನು ಸಲ್ಲಿಸಿ, ಬಳ್ಳಾರಿ ರಾಘವರ ಅಮೋಘ ಅಭಿನಯಗಳ ಹಾಗೂ ಅವರ ಸಾಧನೆಗಳ ಕುರಿತು ಮಾತನಾಡಿದರು. ಬಳ್ಳಾರಿ ರಾಘವರು ವಿದೇಶೀಯರನ್ನೂ ಸಹ ತಮ್ಮ ಅಭಿನಯದ ಮೂಲಕ ಗಮನಸೆಳೆದಿದ್ದರು. ರಾಘವರು ಬಳ್ಳಾರಿಗಷ್ಟೇ ಅಲ್ಲ, ಜಾಗತಿಕ ಮಟ್ಟದ ಮಹಾನ್ ಕಲಾವಿದರಾಗಿದ್ದರು.

ಕನ್ನಡ, ತೆಲುಗು, ಇಂಗ್ಲೀಷ್ ಭಾಷೆಗಳಲ್ಲಿ ನಾಟಕ ಪ್ರದರ್ಶನಗಳನ್ನು ನೀಡಿ ಗಮನಸೆಳೆದಿದ್ದರು. ತಮ್ಮ ವಿಬಿನ್ನ ಕಲೆಯ ಮೂಲಕ ಈ ನಾಡಿನ ಸಂಸ್ಕøತಿ, ಇತಿಹಾಸ, ಸಾಮಾಜಿಕ ಕ್ರಾಂತಿಯನ್ನು ಮೂಡಿಸಿದ್ದರು. ಮಾಜಿ ಸಚಿವರಾದ ಜಿ.ಜನಾರ್ದನ ರೆಡ್ಡಿ, ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮತ್ತು ಜಿ.ಕರುಣಾಕರರೆಡ್ಡಿ ಅವರು, ಅವಧಿಯಲ್ಲಿ ಬಳ್ಳಾರಿ ರಾಘವರ ಗೌರವಾರ್ಥ ನಗರದ ರಾಯಲ್ ವೃತ್ತದಲ್ಲಿ ಬೃಹತ್ ಪುತ್ಥಳಿ ನಿರ್ಮಿಸಿದ್ದಾರೆ. ಬಳ್ಳಾರಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ರಾಘವರ ಪುತ್ಥಳಿ ಅನಾವರಣಗೊಂಡಿದೆ ಎಂದರು. ಬಳ್ಳಾರಿ ಬ್ರಾಹ್ಮಣ ಒಕ್ಕೂಟದ ಉಪಾಧ್ಯಕ್ಷ ಡಾ.ಶ್ರೀನಾಥ್, ಮುಖಂಡರಾದ, ರವೀಂದ್ರನಾಥ್, ಬಜಾರದ ಹರಿಪ್ರಸಾದ್, ಸಿಮೆಂಟ್ ಗಿರಿ, ನೇಮಕಲ್ ರಾವ್, ಸತೀಶ್, ನಂದಕಿಶೋರ್, ಹಿರಿಯ ಕಲಾವಿದರಾದ ಕೆ. ಜಗದೀಶ್, ಎಸ್. ವಿಜಯಸಿಂಹ, ವಿಷ್ಣು, ಗಿರಿ ಕಂಪ್ಯೂಟರ್, ಹಿರಿಯ ಕಲಾವಿದರಾದ ವೀರನಗೌಡ ಕುಣಿಗಿರಿ, ಸಿಂಧನೂರು ಶ್ರೀಧರ, ಪವನ್, ರಂಗನಾಥ, ವಿಠ್ಠಲ್, ಹನುಮಂತಾಚಾರ್, ಗಿರಿ ಡೊಕ್ಕಿ, ವಿಜಯರಾವ್, ಹಡ್ಲಿಗಿ ಸುರೇಂದ್ರ, ಸತೀಶ್ ದೇಸಾಯಿ, ರಾಘವೇಂದ್ರ ಮೋಹನ್, ಕಲಾವಿದ ನಾಗಭೂಷಣ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!