ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ರಾತ್ರಿಯಲ್ಲಿ ಇಡೀ ಊರನ್ನು ಸ್ಮಶಾನವಾಗಿಸಿದ ಭೂಕುಸಿತ ಉಪಗ್ರಹ ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದೆ.
ಪ್ರವಾಹ ಹೇಗೆ ಸಂಭವಿಸಿತ್ತು ಹಾಗೂ ಪ್ರವಾಹದ ಚಿತ್ರಣವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಪಗ್ರಹದ ಮೂಲಕ ತೆಗೆದಿದೆ. ಇದೀಗ ಈ ಫೋಟೋವನ್ನು ಹಂಚಿಕೊಂಡಿದೆ.
ವಯನಾಡಿನಲ್ಲಿ ಯಾರು ಊಹಿಸದ ಪ್ರವಾಹ ಸಂಭವಿಸಿದ್ದು, 300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನು ಇಸ್ರೋ ತೆಗೆದ ಪೋಟೋದಲ್ಲಿ ಗುಡ್ಡದ ಭಾಗಗಳು ಹಾಗೂ ಭೂಮಿಯೂ 86,000 ಚದರ ಮೀಟರ್ ಜಾರಿದೆ. ಇರುವೈಪುಳ ನದಿಯ ಉದ್ದಕ್ಕೂ ಸುಮಾರು 8 ಕಿಲೋಮೀಟರ್ ವರೆಗೆ ಅನೇಕ ದೇಹಗಳು ಹಾಗೂ ಅವಶೇಷಗಳು ಹರಿದು ಹೋಗಿದೆ ಎಂದು ಹೇಳಿದ್ದಾರೆ.