ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರ್ವರ್ ಹ್ಯಾಕ್ ಚರ್ಚೆ ಇಲ್ಲಿಗೆ ಬಿಟ್ಟು ಬಿಡಿ, ಅದೊಂದು ರಾಜಕೀಯ ಸ್ಟೇಟ್ ಮೆಂಟ್ ಎಂದು ಸಚಿವ ಸತೀಶ್ ಜಾರಕಿಹೊಳಿ ಯೂ ಟರ್ನ್ ಹೊಡೆದಿದ್ದಾರೆ.
ಬೆಳಗಾವಿಯ ಹುಕ್ಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದಅವರು, ಸರ್ವರ್ ಹ್ಯಾಕ್ ಆಗಿಲ್ಲ ಅಂದರೆ ಮುಗಿದು ಹೋಯಿತು ಅಷ್ಟೇ. ಕೇಂದ್ರದ ವಿರುದ್ಧ ಫೋನ್ ಟ್ಯಾಪ್, EVM ಹ್ಯಾಕ್ನಂತಹ ಆರೋಪ ಕೇಳಿಬಂದಿದೆ. ಅದೇ ರೀತಿ ಸರ್ವರ್ ಹ್ಯಾಕ್ ಆಗಿರಬಹುದು ಎನ್ನುವುದು ನನ್ನ ಸಂಶಯ ಎಂದು ಹೇಳಿದರು.
ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಪಡೆಯಲು ಅರ್ಜಿ ಸಲ್ಲಿಸಬೇಕಿದೆ. ಆದರೆ ಸರ್ವರ್ ಮಾತ್ರ ಬ್ಯುಸಿ ಎಂದು ತಿಳಿಯುತ್ತಿದೆ. ಈ ಕುರಿತಾಗಿ ಜನರು ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಡುವೆ ಕೇಂದ್ರವು ನಮ್ಮ ಸಿಸ್ಟಮ್ಗಳನ್ನು ಹ್ಯಾಕ್ ಮಾಡಿದೆ ಎಂದು ಮಂಗಳವಾರ ಸಚಿವ ಸತೀಶ್ ಜಾರಕಿಹೊಳಿ ಅವರು ಕೇಂದ್ರದ ವಿರುದ್ಧ ಕಿಡಿಕಾರಿದ್ದರು.
ಇದೀಗ ಯು ಟರ್ನ್ ಹೊಡೆದ ಸತೀಶ್ ಜಾರಕಿಹೊಳಿ, ಬಿಜೆಪಿಯವರು ಈ ತರಹದ ಹಲವು ಹೇಳಿಕೆ ನೀಡಿದ್ದಾರೆ. ಕೆಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬೇಡಿ, ನನಗೆ ಅನಿಸಿದ್ದನ್ನು ನಾನು ಹೇಳಿದ್ದೇನೆ, ಈ ತರಹದ ಆರೋಪ , ಪ್ರತ್ಯಾರೋಪ ಸಾಕಷ್ಟು ಬರುತ್ತದೆ. ಈ ವಿಚಾರ ಇಲ್ಲಿಗೆ ಬಿಡಿ, ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡೋಣ ಎಂದರು.