ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಚೆನ್ನೇನಹಳ್ಳಿಯ ವೇದ್ಯ ವೇದ ವಿಜ್ಞಾನ ಶೋಧ ಸಂಸ್ಥಾನಮ್‌ನಲ್ಲಿ ಉಪಪ್ರಾಚಾರ್ಯರಾಗಿರುವ , ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಚಣಿಲ ಸಿ.ಟಿ.ಸತ್ಯನಾರಾಯಣ ಅವರಿಗೆ ಅದ್ವೈತ ವೇದಾಂತ ಶಾಸ್ತ್ರದ “ಎ ಕ್ರಿಟಿಕಲ್ ಅನಾಲಿಸಿಸ್ ಆಫ್ ತಾರ್ಕಿಕ ಥಿಯರೀಸ್ ಆಸ್ ಫೌಂಡ್ ಇನ್ ಅದ್ವೈತ ವೇದಾಂತ ಸಿದ್ಧಿ”ಎಂಬ ವಿಷಯದಲ್ಲಿ ಸಂಶೋಧನಾ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸೆ.೨೭ರಂದು ಪಿಎಚ್‌ಡಿ ಉಪಾ ಘೋಷಿಸಿದೆ.
ಈ ವರ್ಷಾಂತ್ಯಕ್ಕೆ ನಡೆಯುವ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಅವರು ಉಪಾ ಸ್ವೀಕರಿಸಲಿದ್ದಾರೆ. ಅವರು ಗುತ್ತಿಗಾರು ಗ್ರಾಮದ ಚಣಿಲ ತಿರುಮಲೇಶ್ವರ ಭಟ್ -ವತ್ಸಲಾ ದಂಪತಿ ಸುಪುತ್ರರಾಗಿದ್ದು, ಅದ್ವೈತ ವೇದಾಂತದಲ್ಲಿ ಎಂಎ ಮತ್ತು ಎಂಫಿಲ್ ಪದವಿಯನ್ನೂ ಗಳಿಸಿದ್ದಾರೆ.