ಕನ್ನಡದ ʼಘಟಶ್ರಾದ್ಧʼ ದೇಶದ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲೊಂದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಂತಾರಾಷ್ಟ್ರೀಯ ಚಲನಚಿತ್ರ ವಿಮರ್ಷಕರ ಒಕ್ಕೂಟ (FIPRESCI)ದ ಭಾರತದ ವಿಭಾಗವು ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಚಿತ್ರರಂಗದ ಇತಿಹಾಸದ ಸರ್ವಕಾಲಿಕ ಶ್ರೇಷ್ಠ ಟಾಪ್ 10 ಚಲನಚಿತ್ರಗಳ ಪಟ್ಟಿ ಮಾಡಲಾಗಿದ್ದು, ಅದರಲ್ಲಿ ಕನ್ನಡದ ʼಘಟಶ್ರಾದ್ಧʼ ಸ್ಥಾನಗಳಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರವಾಗಿದೆ.
ಪ್ರಖ್ಯಾತ ಲೇಖಕ ಯು.ಆರ್‌. ಅನಂತಮೂರ್ತಿ ಅವರ ಕಾದಂಬರಿ ಆಧರಿಸಿ 1977ರಲ್ಲಿ ನಿರ್ಮಾಣವಾದ ಘಟಶ್ರಾದ್ಧ ಚಿತ್ರಕ್ಕೆ ಗಿರೀಶ್‌ ಕಾಸರವಳ್ಳಿ ಅವರ ನಿರ್ದೇಶನವಿದೆ. ಈ ಚಿತ್ರ ವಿಧವೆಯರ ಬಾಳಿನ ಕಷ್ಟ ನಷ್ಟಗಳನ್ನು ಎಳೆಎಳೆಯಾಗಿ ತೆರೆದಿಡುತ್ತದೆ. ಸಂಸ್ಥೆ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ಘಟಶ್ರಾದ್ಧಕ್ಕೆ ಟಾಪ್‌ 5 ಚಿತ್ರದ ಸ್ಥಾನ ದೊರಕಿದೆ.

ಪತೇರ್ ಪಾಂಚಾಲಿ‌ ಸರ್ವಕಾಲಿಕ ಶ್ರೇಷ್ಟ ಚಿತ್ರ:

ಲೆಜೆಂಡರಿ ಚಿತ್ರನಿರ್ಮಾತೃ ಸತ್ಯಜಿತ್ ರೇ ಅವರ ವೈಶಿಷ್ಟ್ಯಪೂರ್ಣ “ಪತೇರ್ ಪಾಂಚಾಲಿ” ಚಿತ್ರವನ್ನು  ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಫಿಲ್ಮ್ ಕ್ರಿಟಿಕ್ಸ್ (FIPRESCI) ಸಮೀಕ್ಷೆಯಲ್ಲಿ ಸಾರ್ವಕಾಲಿಕ ಅತ್ಯುತ್ತಮ ಭಾರತೀಯ ಚಲನಚಿತ್ರವೆಂದು ಘೋಷಿಸಲಾಗಿದೆ.
1955 ರಲ್ಲಿ ಬಿಡುಗಡೆಯಾದ ಈ ಚಿತ್ರವು ಭಾರತೀಯ ಚಿತ್ರರಂಗದ ಇತಿಹಾಸದ ಟಾಪ್‌ 10 ಚಿತ್ರಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿಭೂತಿಭೂಷಣ ಬಂಡೋಪಾಧ್ಯಾಯ ಅವರ 1929 ರಲ್ಲಿ ಬಿಡುಗಡೆಯಾದ ಅದೇ ಹೆಸರಿನ ಬಂಗಾಳಿ ಕಾದಂಬರಿಯನ್ನು ಆಧರಿಸಿ, “ಪತೇರ್ ಪಾಂಚಾಲಿ” ಚಿತ್ರ ನಿರ್ಮಿಸಲಾಗಿತ್ತು. ಇದು ರೇ ಅವರ ಚೊಚ್ಚಲ ನಿರ್ದೇಶನದ ಚಿತ್ರವಾಗಿತ್ತು. ಇದರಲ್ಲಿ ಸುಬೀರ್ ಬ್ಯಾನರ್ಜಿ, ಕನು ಬ್ಯಾನರ್ಜಿ, ಕರುಣಾ ಬ್ಯಾನರ್ಜಿ, ಉಮಾ ದಾಸ್‌ಗುಪ್ತ, ಪಿನಾಕಿ ಸೆಂಗುಪ್ತ ಮತ್ತು ಚುನಿಬಾಲಾ ದೇವಿ ನಟಿಸಿದ್ದಾರೆ.
ಈ ಪಟ್ಟಿಯಲ್ಲಿ ಋತ್ವಿಕ್ ಘಾಟಕ್ ಅವರ 1960 ರ ಚಿತ್ರ “ಮೇಘೇ ಧಾಕಾ ತಾರಾ” (ಬಂಗಾಳಿ), ಮೃಣಾಲ್ ಸೇನ್ ಅವರ 1969 ರಲ್ಲಿ ಬಂದ ಚಿತ್ರ “ಭುವನ್ ಶೋಮ್” (ಹಿಂದಿ), ಅಡೂರ್ ಗೋಪಾಲಕೃಷ್ಣನ್ ಅವರ 1981 ರ ಚಿತ್ರ “ಎಲಿಪ್ಪತಯಂ” (ಮಲಯಾಳಂ), ಗಿರೀಶ್ ಕಾಸರವಳ್ಳಿ ಅವರ “ಘಟಶ್ರಾದ್ಧ” (1977) ಚಿತ್ರ , ಎಮ್ ಎಸ್ ಸತ್ಯು ಅವರ 1973 ರಲ್ಲಿ ಬಂದ ಚಲನಚಿತ್ರ “ಗರ್ಮ್ ಹವಾ” (ಹಿಂದಿ), ರೇ ಅವರ 1964 ರ ಚಲನಚಿತ್ರ “ಚಾರುಲತಾ” (ಬಂಗಾಳಿ), ಶ್ಯಾಮ್ ಬೆನಗಲ್ ಅವರ 1974 ರ ಚಲನಚಿತ್ರ “ಅಂಕುರ್” (ಹಿಂದಿ), ಗುರುದತ್ ಅವರ 1954 ರ ಚಲನಚಿತ್ರ “ಪ್ಯಾಸಾ” (ಹಿಂದಿ) ಮತ್ತು ಹತ್ತನೇ ಸ್ಥಾನದಲ್ಲಿ ರಮೇಶ್ ಸಿಪ್ಪಿ ನಿರ್ದೇಶನದ ʼಶೋಲೆʼ (ಹಿಂದಿ) ಚಿತ್ರಗಳಿವೆ.
FIPRESCI-India ಹೇಳಿಕೆ ಪ್ರಕಾರ, ಈ ಸಮೀಕ್ಷೆಯನ್ನು ದೇಶದಲ್ಲಿ ರಹಸ್ಯವಾಗಿ ನಡೆಸಲಾಗಿದೆ. ಈ ಸಮಿಕ್ಷಾ ತಂಡವು 30 ಸದಸ್ಯರನ್ನು ಒಳಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!