73 ವರ್ಷಗಳ ಬಳಿಕ ಹೊಸ ಬದಲಾವಣೆಗೆ ಸಜ್ಜಾದ ಸೌದಿ ಅರೇಬಿಯಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಸೌದಿ ಅರೇಬಿಯಾ ಮದ್ಯದ ವಿಚಾರದಲ್ಲಿ ಭಾರಿ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಇದ್ದ ಮದ್ಯ ನಿಷೇಧ ಕಾಯ್ದೆಯನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಲಾಗಿದೆ.

ಸೌದಿ ಯೋಜನೆಯಾದ ವಿಷನ್‌-2030 ರಡಿಯಲ್ಲಿ ತನ್ನ ಆರ್ಥಿಕತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೇ, ಸೌದಿ ಅರೇಬಿಯಾ 2034ರಲ್ಲಿ ಫಿಫಾ ವಿಶ್ವಕಪ್‌ಗೆ ಆತಿಥ್ಯ ವಹಿಸುತ್ತಿದ್ದು ಇದು ಕೂಡ ತನ್ನ ಕಠಿಣ ನಿಯಮಗಳನ್ನು ಸಡಿಲಗೊಳಿಸಲು ಪ್ರಮುಖ ಕಾರಣವಾಗಿದೆ.

2026 ರ ವೇಳೆಗೆ 600 ಕ್ಕೂ ಹೆಚ್ಚು ಪ್ರವಾಸಿ ತಾಣಗಳಲ್ಲಿ ಮದ್ಯ ಮಾರಾಟವನ್ನು ಪ್ರಾರಂಭಿಸುವ ಯೋಜನೆಯಿದೆ ಎನ್ನಲಾಗಿದೆ. ಐಷಾರಾಮಿ ಹೋಟೆಲ್ ಗಳು, ಉನ್ನತ ದರ್ಜೆಯ ರೆಸಾರ್ಟ್ ಗಳು, ರಾಜತಾಂತ್ರಿಕ ವಲಯ ಹಾಗೂ ಪ್ರವಾಸಿಗರಿಗಾಗಿ ಅಭಿವೃದ್ಧಿ ಪಡಿಸಲಾದ ಸ್ಥಳಗಳಲ್ಲಿ ಮಾತ್ರ ಮದ್ಯ ಮಾರಾಟ ಮಾಡಲಾಗುತ್ತದೆ. ಅನುಮತಿಸಲಾದ ಸ್ಥಳಗಳಲ್ಲಿ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಹಾಗೂ ವಲಸಿಗರಿಗೆ ಮಾತ್ರ ಬಿಯರ್, ವೈನ್ ಹಾಗೂ ಸೈಡರ್ ಪೂರೈಸಲಾಗುತ್ತದೆ. ಆದರೆ ಬಲವಾದ ಆಲ್ಕೋಹಾಲ್ ಯುಕ್ತ ಪಾನೀಯಗಳು ಮಾರಾಟ ಮಾಡುವುದು ನಿಷೇಧವಾಗಿಯೇ ಇರುತ್ತದೆ. ಅದಲ್ಲದೇ ಮನೆ, ಸಾರ್ವಜನಿಕ ಸ್ಥಳ ಗಳು ಹಾಗೂ ಅಂಗಡಿಗಳಲ್ಲಿ ಮದ್ಯ ಲಭ್ಯವಿರುವುದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!