ಪ್ರಿನ್ಸ್‌ ಬಗ್ಗೆ ಟ್ವಿಟ್‌ ಮಾಡಿದ್ದ ಅಮೆರಿಕ ಪ್ರಜೆಗೆ ಸೌದಿಯಲ್ಲಿ 16 ವರ್ಷ ಜೈಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸೌದಿ ಅರೇಬಿಯಾಕ್ಕೆ ಪ್ರವಾಸ ತೆರಳಿದ್ದ ತನ್ನ ಪ್ರಜೆಯೊಬ್ಬನನ್ನು ಬಂಧಿಸಿ 16 ವರ್ಷಗಳ ಜೈಲು ಶಿಕ್ಷೆ ವಿಧಿಸಿರುವ ಸೌದಿ ಕ್ರಮಕ್ಕೆ ಅಮೆರಿಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಫ್ಲೋರಿಡಾದಲ್ಲಿ ವಾಸಿಸುತ್ತಿರುವ 72 ವರ್ಷದ ನಿವೃತ್ತ ಪ್ರಾಜೆಕ್ಟ್ ಮ್ಯಾನೇಜರ್ ಸಾದ್ ಇಬ್ರಾಹಿಂ ಅಲ್ಮಾಡಿ ಅವರು ಕುಟುಂಬವನ್ನು ಭೇಟಿ ಮಾಡಲುಿ ಆಗಮಿಸಿದ್ದಾಗ ಕಳೆದ ನವೆಂಬರ್‌ನಲ್ಲಿ ವಿಮಾನ ನಿಲ್ದಾಣದಲ್ಲೇ ಬಂಧಿಸಲಾಗಿತ್ತು. ಅವರಿಗೆ ಈ ತಿಂಗಳ ಆರಂಭದಲ್ಲಿ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.
ಸಾದ್ ಇಬ್ರಾಹಿಂ ಸೌದಿ ರಾಜ ಮನೆತನದ ಕಟು ಟೀಕಾಕಾರರಾಗಿದ್ದರು. ಸರ್ಕಾರವನ್ನು ಟೀಕಿಸುವ ಕಳೆದ 7 ವರ್ಷಗಳಲ್ಲಿ ಸೌದಿ ಸರ್ಕಾರವನ್ನು ಟೀಕಿಸುವ 14 ಟ್ವಿಟ್‌ ಗಳನ್ನು ಮಾಡಿದ್ದರು. ಅಲ್ಲಿನ ಸರ್ಕಾರವನ್ನು ಭ್ರಷ್ಟ ಎಂದು ಕರೆದಿದ್ದ ಅವರು, 2018 ರಲ್ಲಿ ಸೌದಿ ಪತ್ರಕರ್ತ ಮತ್ತು ವಾಷಿಂಗ್ಟನ್ ಪೋಸ್ಟ್ ಅಂಕಣಕಾರ ಜಮಾಲ್ ಖಶೋಗಿಯ ಹತ್ಯೆಯ ಕುರಿತು ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಬಗ್ಗೆ ಕಟು ಶಬ್ಧಗಳನ್ನು ಬಳಸಿದ್ದರು.
ಸಾದ್ ಇಬ್ರಾಹಿಂ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗಾಗಿ ಸೌದಿಗಳು ದೀರ್ಘಾವಧಿ ಜೈಲು ಶಿಕ್ಷೆಯನ್ನು ಪಡೆದ ಇತ್ತೀಚಿನವರಾಗಿದ್ದಾರೆ.
ತನ್ನ ಸಾಮಾಜಿಕ ಮಾಧ್ಯಮ ಚಟುವಟಿಕೆಯ ಮೂಲಕ ದೇಶಕ್ಕೆ ಹಾನಿ ಮಾಡಿದ ಆರೋಪದ ಮೇಲೆ ಸೌದಿ ನ್ಯಾಯಾಲಯವು ಇತ್ತೀಚೆಗೆ ಮಹಿಳೆಯೊಬ್ಬರಿಗೆ 45 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾನಿಲಯದಲ್ಲಿ ಸೌದಿ ಡಾಕ್ಟರೇಟ್ ವಿದ್ಯಾರ್ಥಿಯೊಬ್ಬರಿಗೆ “ವದಂತಿಗಳನ್ನು” ಹರಡಿದ ಮತ್ತು ಭಿನ್ನಮತೀಯರ ಟ್ವಿಟ್ ಮರುಟ್ವೀಟ್ ಮಾಡಿದ್ದಕ್ಕಾಗಿ 34 ವರ್ಷಗಳ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣವು ಅಂತರರಾಷ್ಟ್ರೀಯ ಆಕ್ರೋಶಕ್ಕೆ ಕಾರಣವಾಗಿತ್ತು.
ತನ್ನ ಪ್ರಜೆ ಬಂಧನದ ಬಗ್ಗೆ ಪ್ರತಿಕ್ರಿಸಿರುವ ವಾಷಿಂಗ್ಟನ್ ತೀವ್ರ ಆಕ್ರೊಶ ವ್ಯಕ್ತಪಡಿಸಿದೆ. ಸೌದಿ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಪ್ರಕರಣದ ಕುರಿತಾಗಿ ನಿರಂತರವಾಗಿ ಮತ್ತು ತೀವ್ರವಾಗಿ ನಮ್ಮ ಕಳವಳಗಳನ್ನು ವ್ಯಕ್ತಪಡಿಸಿದ್ದೇವೆ ಮತ್ತು ನಾವು ಅದನ್ನು ಮುಂದುವರಿಸುತ್ತೇವೆ” ಎಂದು ಅಮೆರಿಕ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!