March 25, 2026
Wednesday, March 25, 2026
spot_img

Save Money | ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ? ಉಳಿತಾಯಕ್ಕೆ ಇಲ್ಲಿದೆ ‘ಮ್ಯಾಜಿಕ್’ ಸೂತ್ರಗಳು!

ಇಂದಿನ ದುಬಾರಿ ಕಾಲದಲ್ಲಿ ದುಡಿದ ಹಣ ಎಲ್ಲಿ ಹೋಗುತ್ತದೆ ಎಂದು ತಿಳಿಯುವುದೇ ಕಷ್ಟ. “ಹಣ ಉಳಿಸುವುದು ಎಂದರೆ ಕೇವಲ ಜಿಪುಣತನವಲ್ಲ, ಅದು ನಾಳಿನ ನೆಮ್ಮದಿಯ ಹಾದಿ” ಎನ್ನುತ್ತಾರೆ ಆರ್ಥಿಕ ತಜ್ಞರು. ನಿಮ್ಮ ಸಣ್ಣ ಉಳಿತಾಯವು ಭವಿಷ್ಯದಲ್ಲಿ ದೊಡ್ಡ ಆಸ್ತಿಯಾಗಲು ಈ ಕೆಳಗಿನ ಸರಳ ಕ್ರಮಗಳನ್ನು ಅನುಸರಿಸಿ:

ನಿಮ್ಮ ಒಟ್ಟು ಆದಾಯದಲ್ಲಿ 50% ಅಗತ್ಯ ವಸ್ತುಗಳಿಗೆ, 30% ಆಸೆಗಳಿಗೆ ಮತ್ತು ಕನಿಷ್ಠ 20% ಹಣವನ್ನು ಕಡ್ಡಾಯವಾಗಿ ಉಳಿತಾಯಕ್ಕೆ ಮೀಸಲಿಡಿ.

ತಿಂಗಳ ಆರಂಭದಲ್ಲೇ ಖರ್ಚುಗಳ ಪಟ್ಟಿಯನ್ನು ಸಿದ್ಧಪಡಿಸಿ. ಅನಗತ್ಯ ಆನ್‌ಲೈನ್ ಶಾಪಿಂಗ್ ಮತ್ತು ಕಂಡಿದ್ದನ್ನೆಲ್ಲಾ ತಕ್ಷಣ ಖರೀದಿಸುವ ಅಭ್ಯಾಸಕ್ಕೆ ಬ್ರೇಕ್ ಹಾಕಿ.

ಹಣವನ್ನು ಕೇವಲ ಬೀರುವಿನಲ್ಲಿ ಇಡುವ ಬದಲು RD, SIP ಅಥವಾ ಚಿನ್ನದ ಮೇಲೆ ಹೂಡಿಕೆ ಮಾಡಿ. ಇದು ನಿಮ್ಮ ಹಣ ಬೆಳೆಯಲು ಸಹಾಯ ಮಾಡುತ್ತದೆ.

ಯಾವುದೇ ಅನಿರೀಕ್ಷಿತ ಆರೋಗ್ಯ ಸಮಸ್ಯೆ ಅಥವಾ ಉದ್ಯೋಗದ ತೊಂದರೆ ಎದುರಾದರೆ ಬಳಸಲು ಕನಿಷ್ಠ 6 ತಿಂಗಳ ಖರ್ಚಿಗೆ ಆಗುವಷ್ಟು ಹಣವನ್ನು ಪ್ರತ್ಯೇಕವಾಗಿ ಇರಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !