ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರವಾಗಿಡಲು ಹಲವಾರು ಯೋಜನೆಗಳಿವೆ. ಆದರೆ ನಮ್ಮ ಗಂಡು ಮಕ್ಕಳ ಕಥೆಯೇನು? ಅವ್ರಿಗೂ ಉತ್ತಮ ಭವಿಷ್ಯ ರೂಪಿಸೋಕೆ ಹಣ ಉಳಿಸೋದು ಬೇಡ್ವಾ? ಖಂಡಿತ ಬೇಕು. ವಿದ್ಯಾಭ್ಯಾಸ, ಆರೋಗ್ಯ, ವಿವಾಹ ಅಥವಾ ಆತ್ಮನಿರ್ಭರ ಭವಿಷ್ಯಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸಿಕೊಂಡರೆ ಭವಿಷ್ಯದಲ್ಲಿ ಹಣದ ಕಷ್ಟ ಎದುರಾಗದು. ಭಾರತ ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಹೆಣ್ಣುಮಕ್ಕಳ ಜೊತೆಗೆ ಗಂಡು ಮಕ್ಕಳಿಗಾಗಿ ಅನೇಕ ಉಳಿತಾಯ ಹಾಗೂ ಹೂಡಿಕೆ ಯೋಜನೆಗಳು ಲಭ್ಯವಿವೆ.
ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF – Public Provident Fund):
PPF ಒಂದು ಭದ್ರ ಮತ್ತು ತೆರಿಗಿ ಮುಕ್ತ ಹೂಡಿಕೆ ಆಯ್ಕೆ. ಪೋಷಕರು ಮಗನ ಹೆಸರಿನಲ್ಲಿ ಖಾತೆ ತೆರೆದು 15 ವರ್ಷಗಳ ಕಾಲ ಹೂಡಿಕೆ ಮಾಡಬಹುದು. ಬಡ್ಡಿದರ ಶೇ. 7.1ರಷ್ಟು (ಸರಾಸರಿ) ಇರುತ್ತದೆ. ಇದು ದೀರ್ಘಕಾಲದ ಹೂಡಿಕೆಗೆ ಸೂಕ್ತ.
ಚಿಲ್ಡ್ರನ್ ಗಿಫ್ಟ್ ಮ್ಯೂಚುಯಲ್ ಫಂಡ್ (Children’s Gift Mutual Fund):
ಮಗನ ಹೆಸರಿನಲ್ಲಿ ಹೂಡಿಕೆ ಮಾಡಲು ಈ ಮ್ಯೂಚುಯಲ್ ಫಂಡ್ ಪರಿಪೂರ್ಣ ಆಯ್ಕೆ. ಲಾಭದ ಪ್ಯಾಸಿವ್ ಆದಾಯ ಹಾಗೂ ಶೇರು ಮಾರುಕಟ್ಟೆಯ ಬೆಳವಣಿಗೆಗಾಗಿ ಹೂಡಿಕೆ ಮಾಡಬಹುದು. ಹೆಚ್ಚು ವರ್ಷಗಳ ಕಾಲ ಹೂಡಿದರೆ ಉತ್ತಮ ಲಾಭ ಖಂಡಿತ.
ಕಿಸಾನ್ ವಿಕಾಸ್ ಪಾತ್ರ (Kisan Vikas Patra):
ಸರಕಾರದ ಉಳಿತಾಯ ಯೋಜನೆ ಇದಾಗಿದ್ದು ವಾರ್ಷಿಕವಾಗಿ ಉಳಿತಾಯವನ್ನು ಒಂದು ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರಕಾರವು ನಿರ್ಧರಿಸಿದ ಬಡ್ಡಿಯ ಮೊತ್ತವನ್ನು ಪಾವತಿಸುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಮೊತ್ತ ಕನಿಷ್ಠ ರೂ 1000 ಆಗಿದೆ. ಹಾಗೂ ಗಂಡು ಮಗುವಿನ ವಯಸ್ಸು 18 ಕ್ಕಿಂತ ಕಡಿಮೆ ಇರಬೇಕು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme):
ಮಾರುಕಟ್ಟೆಯಲ್ಲಿ ಲಭ್ಯವಿರುವ ಸುರಕ್ಷಿತ ಹಾಗೂ ಸುಭದ್ರ ಉಳಿತಾಯ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಸರಕಾರವು ಹೂಡಿಕೆ ಮತ್ತು ರಿಟರ್ನ್‌ಗಳೆರಡನ್ನೂ ನಿರ್ವಹಿಸುತ್ತದೆ ಮತ್ತು ಹೂಡಿಕೆದಾರರಿಗೆ ಪಾವತಿಸುವ ಮಾಸಿಕ ಪಾವತಿಗಳನ್ನು ಖಾತ್ರಿಪಡಿಸುತ್ತದೆ.
ಹಣದ ಸದುಪಯೋಗ ಹಾಗೂ ಭದ್ರತೆಯ ದೃಷ್ಟಿಯಿಂದ ಮಗನ ಭವಿಷ್ಯಕ್ಕಾಗಿ ಪ್ರಾರಂಭದಲ್ಲಿ ಹೂಡಿಕೆ ಆರಂಭಿಸುವುದು ಅತ್ಯಂತ ಅಗತ್ಯ. ಮೇಲ್ಕಂಡ ಯೋಜನೆಗಳಲ್ಲಿ ಪೋಷಕರು ತಮ್ಮ ಸಾಮರ್ಥ್ಯ ಮತ್ತು ಗುರಿಯನ್ವಯ ಆಯ್ಕೆಮಾಡಿ ನಿಗದಿತ ಕಾಲಾವಧಿಗೆ ಹೂಡಿಕೆಯನ್ನು ಮುಂದುವರೆಸಬಹುದಾಗಿದೆ. ಇದು ಮಗನ ಭದ್ರ ಭವಿಷ್ಯಕ್ಕೆ ಸುಲಭ ಮಾರ್ಗವನ್ನು ಒದಗಿಸುತ್ತದೆ.