LIFE STYLE| ʻಹೇರ್‌ಡೈʼಗೆ ಹೇಳಿ ಗುಡ್‌ಬೈ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಯಸ್ಸು ಚಿಕ್ಕದಾದರೂ ತಲೆ ಬಿಳಿಯಾಗಿದ್ಯಲ್ಲ ಅನ್ನೋ ಚಿಂತೆ ಅನೇಕರಿಗೆ. ಆಹಾರ ಪದ್ದತಿ, ವಾತಾವರಣ, ಜೀವನ ಶೈಲಿ ಎಲ್ಲದರಿಂದಾಗಿ ಕೂದಲು ಬಿಳಿಯಾಗುತ್ತಿದೆ. ಈ ಸಮಸ್ಯೆ ಇಂದು ಬಹುತೇಕರಲ್ಲಿ ಸಾಮಾನ್ಯ ಎಂಬಂತಾಗಿದೆ. ಕೆಲವರು ತಮ್ಮ ಕೂದಲು ಬಿಳಿಯಾಗಿದೆ ಎಂಬ ಚಿಂತೆಯಿಂದ ಖಿನ್ನತೆಗೊಳಗಾಗುತ್ತಾರೆ. ಅನೇಕರು ಕೂದಲಿಗೆ ಬಣ್ಣಗಳ ಮೊರೆ ಹೋಗುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ಸೋಪು , ಶ್ಯಾಂಪೂ ಬಳಕೆಯಿಂದಲೂ ಕೂದಲು ಬಿಳಿಯಾಗುತ್ತಿವೆ ಎಂಬ ಮಾತು ಕೇಳುತ್ತಿದೆ. ಬಿಳಿ ಕೂದಲನ್ನು ಬಣ್ಣ ಬಳಸದೆ ಕಪ್ಪು ಮಾಡಲು ಅನೇಕ ಸರಳ ಉಪಾಯಗಳಿವೆ. ಅವೇನೆಂದು ನೋಡೋಣ ಬನ್ನಿ.

ತೆಂಗಿನೆಣ್ಣೆ ಹಾಗೂ ನಿಂಬೆ ರಸವನ್ನು ಚೆನ್ನಾಗಿ ಮಿಶ್ರಗೊಳಿಸಿ ಬಿಸಿ ಮಾಡಿ. ಈ ಮಿಶ್ರಣ ತಣ್ಣಗಾಗಲು ಬಿಡಿ. ಬಳಿಕ ತಣ್ಣಾಗಾದ ಮಿಶ್ರಣವನ್ನು ತಲೆಕೂದಲಿನ ನೆತ್ತಿಯ ಭಾಗದಿಂದ ಹಿಡಿದು, ಕೂದಲಿನ ಬುಡದವರೆಗೂ ಕೂಡ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಕೂದಲು ನೆರೆಯುದನ್ನು ತಡೆಯಬಹುದು.

ಕೂದಲಿಗೆ ಸಾಸಿವೆ ಕಾಳಿನ ಎಣ್ಣೆ ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಸಾಸಿವೆ ಕಾಳುಗಳಲ್ಲಿ ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಒಮೆಗಾ -3 ಮತ್ತು ವಿಟಮಿನ್ ಇ ನಂತಹ ಪ್ರಮುಖ ಪೋಷಕಾಂಶಗಳಿವೆ. ಇದು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಲೆ ಹೊಟ್ಟಿನ ಸಮಸ್ಯೆ ಕೂಡಾ ನಿವಾರಣೆಯಾಗುತ್ತದೆ. ಇದಲ್ಲದೆ, ಇದು ಕೂದಲನ್ನು ಬಲಪಡಿಸುವುದಲ್ಲದೆ, ಕೂದಲಿನ ಕಪ್ಪು ಬಣ್ಣವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಅಂಗಡಿಗಳಲ್ಲಿ ಸಿಗುವ ಕಳಪೆ, ಕೆಮಿಕಲ್‌ ಮಿಶ್ರಿತ ಸಾಸಿವೆ ಎಣ್ಣೆಯನ್ನು ಖಂಡಿತಾ ಬಳಸದಿರಿ.

ಈರುಳ್ಳಿ ರಸದಲ್ಲಿ ಶುದ್ದ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ಪೇಸ್ಟ್ ಮಾಡಿ, ಅದನ್ನು ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಬಿಳಿ ಕೂದಲಿನ ಸಮಸ್ಯೆ ನಿವಾರಣೆಯಾಗುತ್ತದೆ.

ವಿಟಮಿನ್ ಸಿ ಸಮೃದ್ಧವಾಗಿರುವ ನೆಲ್ಲಿಕಾಯಿಂದ ತಯಾರಿಸಿದ ಎಣ್ಣೆಯನ್ನು ತಲೆಕೂದಲ ಬುಡಕ್ಕೆ ಹಚ್ಚುವುದರಿಂದ ಕೂದಲ ಆರೋಗ್ಯವನ್ನು ಸುಲಭವಾಗಿ ಕಾಪಾಡಬಹುದು.

ಮೆಹೆಂದಿ ಬಹಳ ತಂಪು ಹಾಗೂ ಸುಂದರ ಬಣ್ಣವನ್ನು ನೀಡುವ ನೈಸರ್ಗಿಕ ಉತ್ಪನ್ನ. ಇದು ತಲೆಯಲ್ಲಿ ಇರುವ ಬಿಳಿಕೂದಲ ಬಣ್ಣವನ್ನು ಬದಲಿಸುವುದರ ಜೊತೆಗೆ ಬಿಳಿ ಕೂದಲು ಉಂಟಾಗುವುದನ್ನು ತಡೆಯುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!