ಬೇಸಿಗೆಯಲ್ಲಿ ಈ ಆಹಾರ ಪದಾರ್ಥಗಳ ಸೇವನೆ ಮಾಡಬೇಡಿ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಯಾವ್ಯಾವ ಪದಾರ್ಥ? ಇಲ್ಲಿದೆ ಡೀಟೇಲ್ಸ್..
ಬೇಸಿಗೆಯಲ್ಲಿ ಹೆಚ್ಚು ಕಾಫಿ ಸೇವನೆ ಮಾಡುವುದರಿಂದ ದೇಹವು ನಿರ್ಜಲೀಕರಣವಾಗುತ್ತದೆ. ಕಾಫಿಯು ಮೂತ್ರವರ್ಧಕವಾಗಿರುವುದರಿಂದ ಇದನ್ನು ಕುಡಿಯುವುದನ್ನು ತಪ್ಪಿಸಬೇಕು. ಕಾಫಿ ತಪ್ಪಿಸದಿದ್ದರೆ, ದೇಹದ ಉಷ್ಣತೆಯನ್ನು ಹೆಚ್ಚಾಗುತ್ತದೆ ಮತ್ತು ಅಧಿಕ ಬೆವರುವಿಕೆಗೆ ಕಾರಣವಾಗಬಹುದು.
ಬಿಸಿ ವಾತಾವರಣದಲ್ಲಿ ಮಸಾಲೆಯುಕ್ತ ಆಹಾರಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ. ಪರಿಣಾಮವಾಗಿ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಈ ಆಹಾರಗಳನ್ನು ಸೇವಿಸುವುದರಿಂದ ಅಜೀರ್ಣ ಹಾಗೂ ಎದೆಯುರಿಗೆ ಮತ್ತು ಅತಿಯಾದ ಬೆವರುವಿಕೆಗೆ ಕೂಡ ಕಾರಣವಾಗುತ್ತವೆ.
ಬೇಸಿಗೆಯಲ್ಲಿ ನೀವು ಎಣ್ಣೆಯುಕ್ತ ಆಹಾರ ತಿನ್ನುವುದನ್ನು ಕಡಿಮೆ ಮಾಡಬೇಕು. ಎಣ್ಣೆಯಲ್ಲಿ ಕರಿದ ತಿಂಡಿಗಳು, ಬರ್ಗರ್‌ಗಳು ಹಾಗೂ ಕ್ರೀಮಿ ಸಾಸ್‌ಗಳು, ಸಮೋಸ ಮತ್ತು ಫ್ರೆಂಚ್ ಫ್ರೈಯಂತಹ ಆಹಾರವನ್ನು ತಿನ್ನಬೇಡಿ. ಇದರಿಂದ ನಿರ್ಜಲೀಕರಣ ಸಮಸ್ಯೆ ಕಾಡುತ್ತದೆ. ಇವುಗಳನ್ನು ಸೇವಿಸುವುದರಿಂದ ನಿಮಗೆ ದೇಹವು ಭಾರವಾದಂತೆ ಅನಿಸುವುದು, ಅಜೀರ್ಣ ಸಮಸ್ಯೆಯ ಜೊತೆಗೆ ಸೋಮಾರಿತನವೂ ಉಂಟಾಗುತ್ತದೆ.
ಬೇಸಿಗೆಯಲ್ಲಿ ಸೂರ್ಯನ ಬಿಸಿಲು ಏರುತ್ತಿದ್ದಂತೆ ಕೆಲವು ಜನರು ತಣ್ಣನೆಯ ಬಿಯರ್ ಹಾಗೂ ಕಾಕ್ಟೇಲ್‌ಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಈ ಸಮಯದಲ್ಲಿ ಆಲ್ಕೋಹಾಲ್ ಸೇವಿಸಿದರೆ, ಇದು ನಿಮ್ಮ ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ದೇಹದ ಉಷ್ಣತೆ ಹೆಚ್ಚಳಕ್ಕೂ ಕಾರಣವಾಗುತ್ತದೆ. ನಿಮ್ಮದ ದೇಹವು ಶಾಖದಿಂದ ಬಳಲುತ್ತದೆ. ತಾಪಮಾನ ಹೆಚ್ಚಿರುವಾಗ ದೇಹವು ತೀವ್ರ ತೊಂದರೆ ಅನುಭವಿಸುತ್ತದೆ.
ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಜನರು ವಿವಿಧ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಅದರಲ್ಲೂ ಸೋಡಾ, ಎನರ್ಜಿ ಡ್ರಿಂಕ್ಸ್, ಸ್ಪೋರ್ಟ್ಸ್ ಡ್ರಿಂಕ್ಸ್ನಂತಹ ಸಕ್ಕರೆ ಪಾನೀಯಗಳನ್ನು ಅಧಿಕವಾಗಿ ಸೇವಿಸುತ್ತಾರೆ. ಇವುಗಳು ಹೆಚ್ಚಿನ ಪ್ರಮಾಣದ ಸಕ್ಕರೆಯನ್ನು ಹೊಂದಿರುತ್ತವೆ. ಆದ್ದರಿಂದ ಈ ಪಾನೀಯಗಳನ್ನು ತಪ್ಪಿಸಬೇಕು. ಇವುಗಳಿಂದ ದೇಹವು ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ.