ಕುಡಿದು ಗಾಡಿ ಓಡಿಸ್ತಿದ್ದಾರೆ ಸ್ಕೂಲ್‌ ಬಸ್‌ ಡ್ರೈವರ್ಸ್‌, ಒಂದೇ ದಿನದಲ್ಲಿ26 ಚಾಲಕರ ವಿರುದ್ಧ ಕಂಪ್ಲೆಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ಸುರಕ್ಷಿತವಾಗಿ ಬಸ್‌ನಲ್ಲಿ ಕೂರಿಸಿಕೊಂಡು ಶಾಲೆಗೆ ಬಿಟ್ಟು, ಮತ್ತೆ ಸಂಜೆ ಸುರಕ್ಷಿತವಾಗಿ ತಂದು ಮನೆಗೆ ಬಿಡ್ತಾರೆ ಎಂದುಕೊಂಡಿರುವ ಎಷ್ಟೋ ಸ್ಕೂಲ್‌ ಬಸ್‌ ಡ್ರೈವರ್ಸ್‌ ಕುಡಿದು ಗಾಡಿ ಓಡಿಸ್ತಿದ್ದಾರೆ..

ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರಿ ಪೊಲೀಸರು ಸೋಮವಾರ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಇದೇ ವೇಳೆ ಪಾಸಣೆ ನಡೆಸಿದ 3,676 ಶಾಲಾ ಬಸ್‌ಗಳು ಮತ್ತು ವ್ಯಾನ್‌ಗಳ ಪೈಕಿ 26 ಶಾಲಾ ಬಸ್‌ಗಳ ಚಾಲಕರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದು ಈ ವರ್ಷ ದಿನವೊಂದರಲ್ಲಿ ಶಾಲಾ ಬಸ್​​ಗಳ ಚಾಲಕರ ವಿರುದ್ಧ ದಾಖಲಿಸಲಾದ ಅತಿಹೆಚ್ಚಿನ ಸಂಖ್ಯೆಯ ಪ್ರಕರಣಗಳಾಗಿವೆ.

ಒಂದು ತಿಂಗಳ ಹಿಂದೆ ನಡೆದಿದ್ದ ಕಾರ್ಯಾಚರಣೆಯಲ್ಲಿ 23 ಚಾಲಕರು ಮದ್ಯಪಾಮ ಮಾಡಿ ವಾಹನ ಚಲಾಯಿಸಿ ಸಿಕ್ಕಿಬಿದ್ದಿದ್ದರು. ಈ ವರ್ಷ ಇಲ್ಲಿಯವರೆಗೆ ಒಟ್ಟು 72 ಚಾಲಕರ ಮೇಲೆ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ್ದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದೆ. ಇದು ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!