ಹೊಸದಿಗಂತ ಡಿಜಿಟಲ್ ಡೆಸ್ಕ್:
ನೂತನ ಶೈಕ್ಷಣಿಕ ವರ್ಷ ಇಂದಿನಿಂದ ಆರಂಭವಾಗಿದ್ದು, ವಿದ್ಯಾರ್ಥಿಗಳು ಇಂದಿನಿಂದ ಶಾಲೆಗೆ ಹಾಜರಾಗಿದ್ದಾರೆ.
ಬೇಸಿಗೆ ರಜೆ ಕಳೆದು, ಅಜ್ಜಿ ಮನೆ ಸುತ್ತಿ ಮಕ್ಕಳು ಇಂದು ಶಾಲೆಗೆ ಮತ್ತೆ ಹಾಜರಾಗಿದ್ದಾರೆ. ಶಾಲೆಗೆ ಬರುವ ಮಕ್ಕಳನ್ನು ಸ್ವಾಗತಿಸಲು ಇಂದು ಮಕ್ಕಳಿಗಾಗಿ ಸಿಹಿ ತಿಂಡಿ ಮಾಡಲು ಶಾಲೆಗಳಿಗೆ ಸೂಚನೆ ನೀಡಲಾಗುತ್ತದೆ.
ಶಾಲೆಯ ಕೊಠಡಿಗಳು, ಅಡುಗೆ ಮನೆ, ಶಾಲೆಯ ಸುತ್ತಮುತ್ತ ಸ್ವಚ್ಛಗೊಳಿಸಲು ಸೂಚನೆ ನೀಡಿದ್ದು, ಮಕ್ಕಳಿಗಾಗಿ ಊಟಕ್ಕೆ ಸಿಹಿ ಮಾಡಲು ಸೂಚನೆ ನೀಡಲಾಗಿದೆ. ಜೂನ್ 1 ರಿಂದ ಪಠ್ಯಕ್ರಮದ ಬೋಧನೆ ಆರಂಭವಾಗಲಿದೆ.