ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಫೀಸ್‌ನಲ್ಲಿ ಹೈಕ್ ಆದರೂ, ಕೆಲಸದಲ್ಲಿ ಬೋನಸ್ ಸಿಕ್ಕರೂ ಪೋಷಕರು ಅದನ್ನು ಎಂಜಾಯ್ ಮಾಡೋದಕ್ಕೆ ಆಗ್ತಿಲ್ಲ. ಇನ್ನು ಎಷ್ಟೋ ಪೋಷಕರು ಮಕ್ಕಳ ಫ್ಯೂಚರ್ ಬ್ರೈಟ್ ಆಗಿರಲಿ ಎಂದು ಕಷ್ಟಪಟ್ಟು ಪ್ರೈವೇಟ್ ಸ್ಕೂಲ್‌ಗೆ ಸೇರಿಸಿದ್ರೂ ಮಕ್ಕಳ ಫೀಸ್, ಬಟ್ಟೆ, ಬುಕ್ಸ್ ಜೊತೆ ಸ್ಕೂಲ್ ಬಸ್ ಹಣ ಭರಿಸೋದಕ್ಕೆ ಆಗುತ್ತಿಲ್ಲ.
ಡಿಸೇಲ್ ಹೆಚ್ಚಳ ಹಿನ್ನಲೆ ಶಾಲಾ ವಾಹನದ ಶುಲ್ಕ ಹೆಚ್ಚಳಕ್ಕೆ ಖಾಸಗಿ ಶಾಲಾ ಬಸ್ ಸಂಘಟನೆ ಮುಂದಾಗಿದೆ. ಪೋಷಕರು ಈಗ ಶಾಲಾ ಬಸ್‌ಗಳು ಮತ್ತು ವ್ಯಾನ್‌ಗಳ ಶುಲ್ಕ ಹೆಚ್ಚು ಪಾವತಿಸಲು ಸಿದ್ಧರಾಗಬೇಕಾಗಿದೆ.
ಶಾಲಾ ಬಸ್‌ಗಳು ಮತ್ತು ವ್ಯಾನ್ ಶುಲ್ಕದಲ್ಲಿ 10-15% ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ. ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ಗೆ ಸಂಯೋಜಿತವಾಗಿರುವ ಕರ್ನಾಟಕ ಯುನೈಟೆಡ್ ಸ್ಕೂಲ್ ಮತ್ತು ಲೈಟ್ ಮೋಟಾರ್ ವೆಹಿಕಲ್ ಡ್ರೈವರ್ಸ್ ಯೂನಿಯನ್ ಅಧ್ಯಕ್ಷ ಷಣ್ಮುಗಂ ಪಿಎಸ್, ಡೀಸೆಲ್ ಬೆಲೆಯನ್ನು 2 ರೂ. ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಬೆಲೆ ಏರಿಕೆ ಈಗಾಗಲೇ ಜನರ ಮೇಲೆ ಹೊರೆಯಾಗಿದೆ. ಶಾಲಾ ಬಸ್ಸುಗಳು ಮತ್ತು ವ್ಯಾನ್‌ಗಳ ಶುಲ್ಕ ಹೆಚ್ಚಳವು ಪೋಷಕರ ಮೇಲೆ ಹೆಚ್ಚುವರಿ ಹೊರೆಯಾಗಲಿದೆ ಎಂದು ನಮಗೆ ತಿಳಿದಿದೆ, ಆದರೆ ಡೀಸೆಲ್ ಬೆಲೆ ಏರಿಕೆಯನ್ನು ಜನರ ಮೇಲೆ ವರ್ಗಾಯಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದಿದ್ದಾರೆ.