ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ನಾಳೆಯಿಂದ ಶಾಲೆಗಳು ಪುನರಾರಂಭವಾಗಬೇಕಿತ್ತು. ಆದ್ರೆ ಇದೀಗ ಜುಲೈ 1 ರಿಂದ ಶಾಲೆಗಳು ಪುನರಾರಂಭವಾಗಲಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಮಣಿಪುರದ ಎಲ್ಲಾ ಶಾಲೆಗಳ ಪುನರಾರಂಭವನ್ನು ಜುಲೈ 1 ರವರೆಗೆ ಅಥವಾ ಮುಂದಿನ ಆದೇಶದವರೆಗೆ ಮುಂದೂಡಲಾಗಿದೆ ಎಂದು ಶಿಕ್ಷಣ ನಿರ್ದೇಶಕ(ಶಾಲಾ) ಎಲ್. ನಂದಕುಮಾರ್ ಸಿಂಗ್ ಅವರು ಇಂದು ಅಧಿಸೂಚನೆ ಹೊರಡಿಸಿದ್ದಾರೆ.
ಈ ಮೊದಲು ಜೂನ್ 21 ರಂದು ಸಾಮಾನ್ಯ ತರಗತಿಗಳು ಪುನರಾರಂಭಗೊಳ್ಳಲಿವೆ ಎಂದು ಶಿಕ್ಷಣ ಇಲಾಖೆ ಪ್ರಕಟಿಸಿತ್ತು. ಆದ್ರೆ ಮಣಿಪುರವು ಹಿಂಸಾಚಾರ ಇನ್ನೂ ಮುಂದುವರಿದಿದ್ದು, ಹೀಗಾಗಿಜುಲೈ 1 ರಿಂದ ಶಾಲೆಗಳು ಪುನರಾರಂಭವಾಗಲಿವೆ.