ಹೊಸ ದಿಗಂತ ಡಿಜಿಟಲ್ ಡೆಸ್ಕ್
ಜ್ಞಾನವಾಪಿ ಸಮೀಕ್ಷೆಯ ವೇಳೆ ಮುಸ್ಲಿಮರು ತಮ್ಮ ಕೈಕಾಲು ತೊಳೆಯುವ ಪ್ರದೇಶದಲ್ಲಿ ಪತ್ತೆಯಾಗಿದ್ದ ಶಿವಲಿಂಗದ ವೈಜ್ಞಾನಿಕ ಪರೀಕ್ಷೆ ಬೇಡಿಕೆಯನ್ನು ವಾರಾಣಸಿ ಜಿಲ್ಲಾ ನ್ಯಾಯಾಲಯವು ಶುಕ್ರವಾರ ತಿರಸ್ಕರಿಸಿದೆ.
ಇದು ಶಿವಲಿಂಗವಲ್ಲ, ಕಾರಂಜಿ ಎಂಬುದು ಮುಸ್ಲಿಂ ಪಕ್ಷದ ನಿಲುವಾಗಿತ್ತು.
ಸುಪ್ರಿಂ ಕೋರ್ಟ್ ತನ್ನ ಆದೇಶದಲ್ಲಿ ಶಿವಲಿಂಗವೆಂದು ಹೇಳಲಾಗಿರುವುದು ದೊರೆತ ಪ್ರದೇಶವನ್ನು ಸಂಪೂರ್ಣ ಸೀಲ್ ಮಾಡಲು ಹೇಳಿರುವುದರಿಂದ, ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಜಿಲ್ಲಾ ನ್ಯಾಯಾಲಯ ಅನುವು ಮಾಡಿಕೊಡಲಾಗುವುದಿಲ್ಲ ಎಂದು ನ್ಯಾಯವಾದಿ ಡಾ. ಎ ಕೆ ವಿಶ್ವೇಶ ಆದೇಶಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ