ಬಂದೇ ಬಿಡ್ತು ಜೀವಂತ ರೋಬಾಟಿಕ್‌ ತಂತ್ರಜ್ಞಾನ: ಮಾನವನಂತೆ ಸ್ವತಃ ವಾಸಿಯಾಗಬಲ್ಲ ರೋಬಾಟ್‌ ಆವಿಷ್ಕರಿಸಿದ ಜಪಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ತನ್ನ ವಿಶಿಷ್ಟವಾದ ಮೇಧಾ ಶಕ್ತಿಯಿಂದ ಇತರ ಜೀವಿಗಳಿಗಿಂತ ಭಿನ್ನವಾಗಿರೋ ಮಾನವ ಸಮುದಾಯವು ಸದಾ ಒಂದಿಲ್ಲೊಂದು ಆವಿಷ್ಕಾರಗಳನ್ನು ಮಾಡುತ್ತಲೇ ಇದೆ. ರೋಬಾಟ್‌ ಗಳೆಂಬ ಯಂತ್ರಮಾನವನ ತಯಾರಿಕೆ ಇದಕ್ಕೊಂದು ಪ್ರಮುಖ ಉದಾಹರಣೆ. ಈ ರೋಬಾಟ್‌ಗಳು ಥೇಟು ಮಾನವನಂತೆ ಓಡಾಡಬಲ್ಲವು ಮಾತಾಡಬಲ್ಲವು ಎಲ್ಲಾ ಕೆಲಸಗಳನ್ನೂ ಮಾಡಬಲ್ಲವು ಅಷ್ಟೇ ಏಕೆ ಸ್ವಂತ ಬುದ್ಧಿ ಹೊಂದಿ ವಿಚಾರ ಶಕ್ತಿ ಹೊಂದಿರುವ ರೋಬಾಟ್‌ ಒಂದನ್ನು ಕೂಡ ಇಲ್ಲಿಯವರೆಗೆ ಅಭಿವೃದ್ಧಿಪಡಿಸಲಾಗಿದೆ. ಪೌರತ್ವ ಹೊಂದಿರುವ ರೋಬಾಟ್‌ ಉದಾಹರಣೆ ಕೂಡ ನಮ್ಮೆದುರಲ್ಲಿದೆ.

ಜಪಾನ್‌ ದೇಶವು ಇದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಜೀವಂತ ರೋಬಾಟ್‌ ಒಂದನ್ನು ತಯಾರಿಸಿದೆ. ಟೋಕಿಯೋ ವಿಶ್ವವಿದ್ಯಾಲಯದ ಸಂಶೋಧಕರು ಜೀವಂತವಿರುವ ರೋಬಾಟಿಕ್‌ ಬೆರಳೊಂದನ್ನು ತಯಾರಿಸಿದ್ದಾರೆ. ಇದು ಮಾನವ ಬೆರಳಿನಂತೆ ಚಲಿಸಬಲ್ಲುದು ಅಲ್ಲದೇ ಇದರಲ್ಲಿ ಜೀವಕೋಶಗಳೂ ಇವೆ. ಜೀವಂತ ಚರ್ಮದ ಅಂಗಾಂಶ ಕೃಷಿಯಿಂದ ಈ ಬೆರಳನ್ನು ತಯಾರಿಸಲಾಗಿದೆ. ಮಾನವನ ಬೆರಳಿನಂತೆ ಗಾಯವಾದರೆ ಇದು ಸ್ವತಃ ವಾಸಿಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

ಹೈಡ್ರೋಜೆಲ್ ಎಂದು ಕರೆಯಲಾಗುವ ಹಗುರವಾದ ಕಾಲಜನ್ ಮ್ಯಾಟ್ರಿಕ್ಸ್‌ನಿಂದ ಸಂಶ್ಲೇಷಿತ ಚರ್ಮವನ್ನು ತಯಾರಿಸಿ ಅದರೊಳಗೆ ಫೈಬ್ರೊಬ್ಲಾಸ್ಟ್‌ಗಳು ಮತ್ತು ಕೆರಾಟಿನೋಸೈಟ್‌ಗಳು ಎಂದು ಕರೆಯಲ್ಪಡುವ ಹಲವಾರು ರೀತಿಯ ಜೀವಂತ ಚರ್ಮದ ಕೋಶಗಳನ್ನು ಬೆಳೆಯಲಾಗುತ್ತದೆ. ಈ ಜೀವ ಕೋಶಗಳ ಮೂಲಕ ಈ ಬೆರಳನ್ನು ತಯಾರಿಸಲಾಗಿದ್ದು ಇದು ಥೇಟ್‌ ಮಾನವ ಚರ್ಮದಂತೆ ಪುನಃ ಜೋಡಣೆಯಾಗುವ ಸಾಮರ್ಥ್ಯ ಹೊಂದಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!