ಮ್ಯಾನ್ಮಾರ್, ಬ್ಯಾಂಕಾಕ್‌ನ ಭೂಕಂಪನ ತೀವ್ರತೆ 334 ಅಣುಬಾಂಬ್ ಸ್ಫೋಟಕ್ಕೆ ಸಮ ಎಂದ ವಿಜ್ಞಾನಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮ್ಯಾನ್ಮಾರ್, ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದ ತೀವ್ರತೆ 334 ಅಣುಬಾಂಬ್‌ಗಳಿಗೆ ಸಮನಾದ್ದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಅಮೆರಿಕದ ಭೂವಿಜ್ಞಾನಿ ಜೆಸ್ ಫೀನಿಕ್ಸ್ ಮಾತನಾಡಿ, ಮ್ಯಾನ್ಮಾರ್‌ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪವು ದೇಶದ ಮಧ್ಯಭಾಗವನ್ನು ನಾಶ ಮಾಡಿದೆ. ಇದು ಅತ್ಯಂತ ಕರಾಳವಾದ ಘಟನೆ ಎಂದಿದ್ದಾರೆ.
ಈ ನಡುವೆ ಉಭಯ ಪ್ರದೇಶಗಳಲ್ಲಿ ಅವಶೇಷಗಳ ಅಡಿಗಳಲ್ಲಿ ಸಿಲುಕಿರುವ ರಕ್ಷಣೆ ಮುಂದುವರಿದಿದೆ. ಒಂದೆಡೆ ಸಾವು ನೋವು ಹೆಚ್ಚುತ್ತಿದ್ದರೆ ಇನ್ನೊಂದೆಡೆ ಮನೆಮಠ ಕಳೆದುಕೊಂಡು ಅಂತಂತ್ರರಾದವರ ರೋಧನ ಮುಗಿಲುಮುಟ್ಟುತ್ತಿದೆ. ಸಧ್ಯ ಸಾವಿನ ಸಂಖ್ಯೆ 1,644ಕ್ಕೆ ಏರಿದ್ದು, 3,408ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮ್ಯಾನ್ಮಾರ್‌ನ ಸೇನಾ ಸರ್ಕಾರ ಘೋಷಿಸಿದೆ.

ಈ ನಡುವೆ ಭೂಗರ್ಭಶಾಸ್ತ್ರದ ವಿಜ್ಞಾನಿಗಳು ಪ್ರಬಲ ಭೂಕಂಪನದ ಬಗ್ಗೆ ಅಧ್ಯಯನ ಆರಂಭಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!