ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಕೂಡ ಈಗ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದರಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಇದರ ನಡುವೆ ಇದೀಗ ಮತ್ತೊಂದು ಹೊಡೆತ ಬೀಳಲು ಸಜ್ಜಾಗಿದೆ.
ಇತ್ತೀಚೆಗಷ್ಟೇ ಚರ್ಚೆಗೆ ಕಾರಣವಾಗಿದ್ದ ಹಾಲಿನ ದರ ಏರಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಸಚಿವ ಕೆ ವೆಂಕಟೇಶ್ ಪ್ರಮುಖವಾಗಿ ರೈತರಿಗೆ ಅನುಕೂಲವಾಗಬೇಕು. ಆದ್ದರಿಂದ ಹಾಲಿನ ದರ ಏರಿಕೆ ಮಾಡುತ್ತೇವೆ ಎಂದರು.
ಹಾಲಿನ ದರ ಏರಿಸುವಂತೆ ರೈತರು ಮತ್ತು ಒಕ್ಕೂಟದಿಂದ ಸಾಕಷ್ಟು ಒತ್ತಾಯ ಬರುತ್ತಿದೆ. ಹಾಲಿನ ದರ 5 ರೂ.ಗೆ ಹೆಚ್ಚಿಸುವಂತೆ ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.