March 23, 2026
Monday, March 23, 2026
spot_img

ಮದ್ದೂರಿನಲ್ಲಿ ಸ್ಕೂಟರ್‌ಗೆ ಸರಕು ಸಾಗಾಣೆ ವಾಹನ ಡಿಕ್ಕಿ: ಸವಾರ ಸಾವು

ಹೊಸದಿಗಂತ ವರದಿ, ಮಂಡ್ಯ :

ಸರಕು ಸಾಗಾಣಿಕೆ ವಾಹನಕ್ಕೆ ಸ್ಕೂಟರ್ ಹಿಂದಿನಿಂದ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟು, ಹಿಂಬದಿ ಸವಾರ ತೀವ್ರವಾಗಿ ಗಾಯಗೊಂಡಿರುವ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕದಲೂರು ಗೇಟ್ ಬಳಿ ಬುಧವಾರ ಸಂಜೆ ಜರುಗಿದೆ.

ಕೆ .ಎಂದೊಡ್ಡಿಯ ಅಂಚೆ ಇಲಾಖೆ ನೌಕರ ಹಾಲಿ ಶಿಕ್ಷಕರ ಬಡಾವಣೆಯಲ್ಲಿ ವಾಸವಾಗಿರುವ ಎನ್.ಹೆಚ್. ಮಹೇಶ್ ಪುತ್ರ ಎನ್. ಎಂ . ಯಶಸ್ ಗೌಡ 22 ಮೃತಪಟ್ಟ ಸ್ಕೂಟರ್ ಚಾಲಕ, ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಯಶಸ್ ಗೌಡ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಕೊನೆ ಉಸಿರೆಳೆದಿದ್ದಾರೆ.

ಸ್ಕೂಟರ್ ಹಿಂಬದಿ ಸವಾರ ಖಾಸಗಿ ನರ್ಸಿಂಗ್ ಹೋಮ್ ನೌಕರ ನಂದು 25 ದೂರವಾಗಿ ಗಾಯಗೊಂಡಿದ್ದು, ಪಟ್ಟಣದ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಯಶಸ್ ಗೌಡ ಬೆಂಗಳೂರಿನ ಹಿರೋ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಶಬರಿಮಲೆ ಯಾತ್ರೆ ಮಾಡಲು ಕಳೆದ ಮೂರು ದಿನಗಳ ಹಿಂದೆ ಮಾಲೆ ಧರಿಸಿದ್ದ ಯಶಸ್ ಗೌಡ ಪೂಜೆಗೆ ಬಾಳೆ ಎಲೆ ತರಲು ಹಗಲೂರು ಗೇಟ್ ಬಳಿ ನನ್ನ ಎಲೆಕ್ಟ್ರಿಕ್ ಸ್ಕೂಟರ್ನಲ್ಲಿ ಸ್ನೇಹಿತ ನಂದು ಜೊತೆ ಬರುತ್ತಿದ್ದಾಗ ಮದ್ದೂರು ತುಮಕೂರು ರಾಜ್ಯ ಹೆದ್ದಾರಿಯಲ್ಲಿ ಮುಂದೆ ಹೋಗುತ್ತಿದ್ದ ಗೂಡ್ಸ್ ವಾಹನದ ಚಾಲಕ ಅಡ್ಡ ದಿಡಿಯಾಗಿ ಚಾಲನೆ ಹಠಿತಾನೇ ಬ್ರೇಕ್ ಹಾಕಿದಾಗ ಸ್ಕೂಟರ್ ಹಿಂದಿನಿಂದ ಡಿಕ್ಕಿಹೊಡೆದು ಅಪಘಾತ ಸಂಭವಿಸಿದೆ. ಈ ಸಂಬಂಧ ಕೆಸ್ತೂರು ಪೊಲೀಸರು ಪ್ರಕರಣದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !