ಹೊಸದಿಗಂತ ವರದಿ, ಮಡಿಕೇರಿ:
ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಲಾರಿಗೆ ಡಿಕ್ಕಿಯಾದ ಪರಿಣಾಮ ಸ್ಕೂಟರ್’ನಲ್ಲಿದ್ದ ಯುವಕರಿಬ್ಬರು ಸಾವಿಗೀಡಾದ ಘಟನೆ ಕೊಡಗರಹಳ್ಳಿಯ ಮಾರುತಿನಗರದಲ್ಲಿ ನಡೆದಿದೆ.
ಮೃತರನ್ನು ಸುಂಟಿಕೊಪ್ಪ ಬಳಿಯ ಬಾಳೆಕಾಡು ತೋಟದ ನಿವಾಸಿ, ಆಟೋ ಚಾಲಕ ನಾರಾಯಣ ಪೂಜಾರಿ ಎಂಬವರ ಪುತ್ರ ರಕ್ಷಿತ್ ಹಾಗೂ ಗರಗಂದೂರು ಗ್ರಾಮದ ಮಂಜು ಎಂದು ಗುರುತಿಸಲಾಗಿದೆ.
ಮಂಗಳವಾರ ಮಧ್ಯಾಹ್ನ 2.30ರ ಸುಮಾರಿಗೆ ಕೊಡಗರಹಳ್ಳಿ ಮಾರುತಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೊದಲು ಲಾರಿಗೆ ಡಿಕ್ಕಿ ಹೊಡೆದ ಸ್ಕೂಟರ್, ನಂತರ ರಸ್ತೆ ಬದಿಯ ಮೋರಿಗೆ ಅಪ್ಪಳಿಸಿದೆ. ಈ ಸಂದರ್ಭ ಸ್ಕೂಟರ್’ನಲ್ಲಿದ್ದ ಇಬ್ಬರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.