ಹೊಸದಿಗಂತ ವರದಿ ಪುತ್ತೂರು:
ಸರಕಾರದ ಅಧೀನದಲ್ಲಿರುವ ಅಂಬೇಡ್ಕರ್ ಭವನ ಕಟ್ಟಡ ಮತ್ತು ಅದರ ಎದುರುಗಡೆ ಇರುವ ದ್ವಜಸ್ಥಂಭದಲ್ಲಿ ಎಸ್ ಡಿ ಪಿ ಐ ಪಕ್ಷದ ಧ್ವಜವನ್ನು ಹಾರಿಸಿರುವ ಘಟನೆ ಸವಣೂರು ಸಮೀಪದ ಮಾಂತುರು ಎಂಬಲ್ಲಿ ನಡೆದಿದೆ.
ಎಸ್ ಬಿ ಪಿ ಐ ಪಕ್ಷದ ಕಾರ್ಯಕ್ರಮ ಒಂದರ ಹಿನ್ನೆಲೆಯಲ್ಲಿ ನಿನ್ನೆ ಅಂಬೇಡ್ಕರ್ ಭವನ ಮತ್ತು ಅದರ ಎದುರು ಇರುವ ದ್ವಜಸ್ತಂಭದಲ್ಲಿ ಎಸ್ ಡಿ ಪಿ ಐ ಪಕ್ಷದ ಧ್ವಜವನ್ನು ಹಾರಿಸಿರುವುದು ನಿನ್ನೆ ಸಂಜೆ ವೇಳೆ ಕಂಡು ಬಂದಿದೆ.
ಇದು ಸರಕಾರಕ್ಕೆ ಸಂಬಂಧಪಟ್ಟ ಸುತ್ತು ಆಗಿರುವ ಕಾರಣ ಇಲ್ಲಿ ಯಾವುದೇ ಪಕ್ಷದ ಧ್ವಜವನ್ನು ಹಾರಿಸುವಂತಿಲ್ಲ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅಂಬೇಡ್ಕರ್ ಭವನ ಮತ್ತು ಅದರ ಎದುರು ಇರುವ ಧ್ವಜ ಸ್ತಂಭದಲ್ಲಿ ಎಸ್ ಡಿ ಪಿ ಐ ಪಕ್ಷದ ಧ್ವಜವನ್ನು ಹಾರಿಸಿರುವುದು ನಿನ್ನೆ ಸಂಜೆ ವೇಳೆ ಪತ್ತೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.