ಗೋಕರ್ಣದಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಳ: ಪ್ರವಾಸಿಗರು ನೀರಿಗಿಳಿಯದಂತೆ ನಿರ್ಬಂಧ

ಹೊಸದಿಗಂತ ವರದಿ, ಗೋಕರ್ಣ:

ಗೋಕರ್ಣದಲ್ಲಿ ಸಮುದ್ರ ಅಲೆಗಳ ಅಬ್ಬರ ಹೆಚ್ಚಿರುವ ಕಾರಣ ಪ್ರವಾಸಿಗರು ನೀರಿಗಿಳಿಯದಂತೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ನಿರ್ಬಂಧಿಸಿದ್ದು, ಈ ಕುರಿತು ಇಲ್ಲಿನ ಎಲ್ಲಾ ಕಡಲತೀರದಲ್ಲಿ ನಾಮಫಲಕ ಅಳವಡಿಸಲಾಗಿದೆ.

ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಮುಂಗಾರಿನ ಅವಧಿಯಲ್ಲಿ ಈ ನಿಯಮ ಜಾರಿಯಲ್ಲಿರುತ್ತದೆ.
ಪ್ರಸ್ತುತ ಸಮುದ್ರದ ಅಲೆಯ ಆರ್ಭಟ ಹೆಚ್ಚಾಗಿದ್ದು, ಆದರೂ ಪ್ರವಾಸಿಗರು ಮಾತು ಮೀರಿ ಮುನ್ನೆಡೆಯುವ ಸಾಹಸ ಮಾಡುತ್ತಿದ್ದು, ಜೀವರಕ್ಷಕ ಸಿಬ್ಬಂದಿ ಪ್ರವಾಸಿಗರಿಗೆ ತಿಳಿ ಹೇಳಿ ನಿಯಂತ್ರಿಸುತ್ತಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!