ಬೇಕಾಗುವ ಸಾಮಗ್ರಿಗಳು:
1 ಕಪ್ ಹಣ್ಣಾದ ಹಲಸಿನ ತೊಳೆಗಳು
½ ಕಪ್ ಸಕ್ಕರೆ
1 ಕಪ್ ಕೆನೆ (ಫ್ರೆಶ್ ಕ್ರೀಮ್)
½ ಕಪ್ ಸಿಹಿಗೊಳಿಸಿದ ಕಂಡೆನ್ಸ್ಡ್ ಮಿಲ್ಕ್
¼ ಕಪ್ ಹಾಲು
ಮಾಡುವ ವಿಧಾನ:
ಮೊದಲಿಗೆ ಹಲಸಿನ ತೊಳೆಗಳನ್ನು ಮತ್ತು ಸಕ್ಕರೆಯನ್ನು ಮಿಕ್ಸರ್ ಜಾರ್‌ಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಸ್ವಲ್ಪ ನೀರು ಅಥವಾ ಹಾಲು ಬೇಕಿದ್ದರೆ ಸೇರಿಸಿಕೊಳ್ಳಬಹುದು. ಒಂದು ಬಟ್ಟಲಿನಲ್ಲಿ ಕೆನೆ ಹಾಕಿ ಚೆನ್ನಾಗಿ ಗಟ್ಟಿಯಾಗುವವರೆಗೆ ಕಡಿಯಿರಿ. ಈಗ ಕಡೆದ ಕೆನೆಗೆ ರುಬ್ಬಿದ ಹಲಸಿನ ಹಣ್ಣಿನ ಮಿಶ್ರಣ ಮತ್ತು ಕಂಡೆನ್ಸ್ಡ್ ಮಿಲ್ಕ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ರುಚಿಯನ್ನು ಪರೀಕ್ಷಿಸಿ, ಸಕ್ಕರೆ ಕಡಿಮೆ ಎನಿಸಿದರೆ ಸ್ವಲ್ಪ ಸೇರಿಸಿಕೊಳ್ಳಬಹುದು. ಈ ಮಿಶ್ರಣವನ್ನು ಗಾಳಿಯಾಡದ ಡಬ್ಬಕ್ಕೆ ಹಾಕಿ ಫ್ರೀಜರ್‌ನಲ್ಲಿ ಕನಿಷ್ಠ 6-8 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಗಟ್ಟಿಯಾಗಲು ಬಿಡಿ. ಐಸ್ ಕ್ರೀಮ್ ಗಟ್ಟಿಯಾದ ನಂತರ, ಸ್ಕೂಪ್‌ನಿಂದ ತೆಗೆದು ಸವಿಯಲು ಕೊಡಿ. ಒಮ್ಮೆ ಟ್ರೈ ಮಾಡಿ ನೋಡಿ, ಖಂಡಿತ ನಿಮಗೆ ಇಷ್ಟವಾಗುತ್ತೆ.