ಹೊಸದಿಗಂತ ಡಿಜಿಟಲ್ ಡೆಸ್ಕ್:
ಇರಾನ್ನಿಂದ ಇಲ್ಲಿಯವರೆಗೆ ಆಪರೇಷನ್ ಸಿಂಧು ಅನ್ವಯ 500ಕ್ಕೂ ಹೆಚ್ಚು ಭಾರತೀಯರು ದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇರಾನ್- ಇಸ್ರೇಲ್ ಸಂಘರ್ಷದ ಬಳಿಕ ಇರಾನ್ನಲ್ಲಿರುವ ಭಾರತೀಯರನ್ನು ಕರೆತರುವ ವ್ಯವಸ್ಥೆ ಮಾಡಲಾಗಿದ್ದು, ವಿದೇಶಾಂಗ ಸಚಿವಾಲಯವು ಸ್ಥಳಾಂತರಿಸುವ ಕಾರ್ಯಾಚರಣೆಯ ಸ್ಥಿತಿಯ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ.
ಸ್ಥಳಾಂತರ ನಡೆಸಿದವರಲ್ಲಿ ಹೆಚ್ಚಾಗಿ ವಿದ್ಯಾರ್ಥಿಗಳಿದ್ದು, ಅವರೆಲ್ಲಾ ಶುಕ್ರವಾರ ತಡರಾತ್ರಿ ದೆಹಲಿ ತಲುಪಿಸಿದ್ದಾರೆ.
ಇರಾನ್ನಲ್ಲಿರುವ ಭಾರತೀಯರ ಸ್ಥಳಾಂತರವನ್ನು ಬುಧವಾರದಿಂದ ಆಪರೇಷನ್ ಸಿಂಧು ಕಾರ್ಯಾಚರಣೆ ಮೂಲಕ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ಘೋಷಣೆ ಮಾಡಿತ್ತು.
ಆಪರೇಷನ್ ಸಿಂಧು ವಿಮಾನಗಳು ಭಾರತೀಯ ನಾಗರಿಕರನ್ನು ಮನೆಗೆ ಕರೆತರುತ್ತಿವೆ. ಇರಾನ್ನಿಂದ 290 ಭಾರತೀಯರನ್ನು ಸ್ಥಳಾಂತರ ಮಾಡಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಮತ್ತು ಧಾರ್ಮಿಕ ಯಾತ್ರಾರ್ಥಿಗಳು ಇದ್ದಾರೆ. ಜೂನ್ 20ರಂದು ರಾತ್ರಿ 11.30ಕ್ಕೆ ನವದೆಹಲಿಗೆ ವಿಮಾನವನ್ನು ಕಾರ್ಯದರ್ಶಿ ಅರುಣ್ ಚಟರ್ಜಿ ಸ್ವಾಗತಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಂದೀರ್ ಜೈಸ್ವಾಲ್ ಎಕ್ಸ್ ಜಾಲತಾಣದಲ್ಲಿ ತಿಳಿಸಿದ್ದಾರೆ.