ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ರಾಜ್ಯದ ಸಿವಾನ್ ಜಿಲ್ಲೆಯಲ್ಲಿ ಇಂದು (ಶನಿವಾರ) ಮತ್ತೊಂದು ಸೇತುವೆ ಕುಸಿದಿದೆ. ದಾರೌಂಡಾ ಮತ್ತು ಮಹಾರಾಜ್‌ಗಂಜ್ ಬ್ಲಾಕ್‌ಗಳಲ್ಲಿ ಕಾಲುವೆ ಮತ್ತು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸಣ್ಣ ಸೇತುವೆಯೊಂದು ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಕುಸಿದು ಬಿದ್ದಿದೆ.
ಸೇತುವೆ ಕುಸಿತವಾದ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಇದು ತುಂಬಾ ಹಳೆಯ ಸೇತುವೆಯಾಗಿದ್ದು, ಮೇಲ್ನೋಟಕ್ಕೆ ಕಾಲುವೆಯ ಮೂಲಕ ನೀರು ಬಿಡುವಾಗ ಸೇತುವೆಯ ಪಿಲ್ಲರ್‌ಗಳು ಕುಸಿದಿವೆ. ಅದನ್ನು ಪುನಃಸ್ಥಾಪಿಸುವವರೆಗೆ ಪೀಡಿತ ಹಳ್ಳಿಗಳ ನಿವಾಸಿಗಳು ಸಾಧ್ಯವಾದಷ್ಟು ಕಡಿಮೆ ಅನಾನುಕೂಲತೆಯನ್ನು ಎದುರಿಸುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಕುಲ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಸೇತುವೆಯು ನೋಡನೋಡುತ್ತಿದ್ದಂತೆ ಎರಡಾಗಿ ಮುರಿದು ಬಿದ್ದಿರುವ ಕ್ಷಣಗಳ ವಿಡಿಯೋ ವೈರಲ್ ಆಗಿದೆ. 1991ರಲ್ಲಿ ಆ ಸಮಯದಲ್ಲಿ ಮಹಾರಾಜ್‌ಗಂಜ್ ಶಾಸಕರಾಗಿದ್ದ ಉಮಾ ಶಂಕರ್ ಸಿಂಗ್ ಅವರ ಕೊಡುಗೆಯೊಂದಿಗೆ ಈ ಸೇತುವೆಯನ್ನು ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಒಂದು ವಾರದಲ್ಲಿ ಎರಡನೇ ಸೇತುವೆ ಕುಸಿತ:
ಬಿಹಾರದ ಅರಾರಿಯಾದಲ್ಲಿ ಹೊಸದಾಗಿ ನಿರ್ಮಿಸಲಾದ ಸೇತುವೆ ಕುಸಿದ 4 ದಿನಗಳ ನಂತರ ಇಂದಿನ ಈ ಘಟನೆ ನಡೆದಿತ್ತು. ಸೇತುವೆಯ ಸಮೀಪ ರಸ್ತೆಗಳು ಇನ್ನೂ ನಿರ್ಮಾಣವಾಗದ ಕಾರಣ ಸೇತುವೆಯನ್ನು ಸಾರ್ವಜನಿಕರಿಗೆ ತೆರೆದಿರಲಿಲ್ಲ. ಈ ಸೇತುವೆಯು ಕುರ್ಸಾ ಕಾಂತಾ ಮತ್ತು ಅರಾರಿಯಾ ಜಿಲ್ಲೆಯ ಸಿಕ್ಟಿ ಪ್ರದೇಶಗಳನ್ನು ಸಂಪರ್ಕಿಸುತ್ತದೆ.
ಅರಾರಿಯಾ ಸೇತುವೆ ಕುಸಿತಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಗ್ರಾಮೀಣ ಕಾಮಗಾರಿ ಇಲಾಖೆ ಕ್ರಮಕ್ಕೆ ಮುಂದಾಗಿದೆ. 183 ಮೀಟರ್ ಉದ್ದದ ಸೇತುವೆ ಕುಸಿತವು ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಇದು 2023ರಿಂದ ಬಿಹಾರದಲ್ಲಿ 7ನೇ ಸೇತುವೆ ಕುಸಿತವಾಗಿದೆ. ಈ ವರ್ಷ ಕುಸಿತವಾದ ಎರಡನೇ ಸೇತುವೆಯಾಗಿದೆ. 12 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಸೇತುವೆ ಉದ್ಘಾಟನೆಗೂ ಮುನ್ನವೇ ಕುಸಿದು ಬಿದ್ದಿತ್ತು.