ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವದ ಬೆಸ್ಟ್ ಚೀಸ್ ಡೆಸರ್ಟ್‌ಗಳ ಪಟ್ಟಿಯಲ್ಲಿ ರಸಗುಲ್ಲಾ ಎರಡನೇ ಸ್ಥಾನ ಪಡೆದಿದೆ.
ಭಾರತದಲ್ಲಿ ರಸಗುಲ್ಲಾ ಪ್ರಿಯರಿಗೆ ಕೊರತೆಯೇ ಇಲ್ಲ, ಒಂದು ರಸಗುಲ್ಲಾ ತಿನ್ನೋಕೆ ಹೋಗಿ ಮೂರ್ನಾಲ್ಕು ತಿಂದು ಬರುತ್ತಾರೆ. ಇದೀಗ ಭಾರತದ ರಸಗುಲ್ಲಾಕೆ ವಿಶ್ವಮಟ್ಟದಲ್ಲಿ ಮನ್ನಣೆ ಸಿಕ್ಕಿದೆ.
ಎರಡನೇ ಸ್ಥಾನವನ್ನು ರಸಗುಲ್ಲಾ ಪಡೆದಿದ್ದರೆ ಪೋಲೆಂಡ್‌ನ ಸೆರ್ನಿಕ್ ಎನ್ನುವ ಖಾದ್ಯ ಮೊದಲ ಸ್ಥಾನ ಪಡೆದಿದೆ. ಇದೊಂದು ರೀತಿಯ ಚೀಸ್‌ಕೇಕ್ ಆಗಿದೆ.