Tuesday, October 28, 2025

ಯಾಂಗೋನ್‌ನಿಂದ ದೆಹಲಿಗೆ ಬಂದ ‘ಸೀಕ್ರೆಟ್ ಗೋಲ್ಡ್’ ಕಳ್ಳಸಾಗಣೆ ವಿಫಲ: ‘ಗೋಲ್ಡ್ ಲೇಡಿ’ ಅರೆಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಪ್ರಮಾಣದ ಚಿನ್ನದ ಕಳ್ಳಸಾಗಣೆ ಯತ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಭೇದಿಸಿದ್ದಾರೆ. ಯಾಂಗೋನ್‌ನಿಂದ ಬಂದ ವಿಮಾನ 8M 620 ರಲ್ಲಿ ಆಗಮಿಸಿದ ಮಹಿಳಾ ಪ್ರಯಾಣಿಕಳನ್ನು ತಪಾಸಣೆಗೊಳಪಡಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಆಕೆ ತನ್ನ ಒಳ ಉಡುಪುಗಳಲ್ಲಿ ಸುಮಾರು 997.5 ಗ್ರಾಂ ತೂಕದ ಆರು ಚಿನ್ನದ ಬಿಸ್ಕತ್ತುಗಳನ್ನು ಬಹಳ ಕುಶಲತೆಯಿಂದ ಅಡಗಿಸಿಟ್ಟುಕೊಂಡಿದ್ದಳು. ವಿಮಾನ ನಿಲ್ದಾಣದಲ್ಲಿನ ತೀವ್ರ ಪರಿಶೀಲನೆಯ ವೇಳೆ ಅಧಿಕಾರಿಗಳಿಗೆ ಚಿನ್ನವಿರುವುದು ಕಂಡುಬಂದಿದೆ.

ಕಳ್ಳಸಾಗಣೆದಾರಳು ಗಮ್ಯಸ್ಥಾನಕ್ಕೆ ತಲುಪಿಸಲು ಪ್ರಯತ್ನಿಸಿದ ಈ ಚಿನ್ನದ ಬಿಸ್ಕತ್ತುಗಳನ್ನು 1962ರ ಕಸ್ಟಮ್ಸ್ ಕಾಯ್ದೆಯನ್ವಯ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮಹಿಳಾ ಪ್ರಯಾಣಿಕಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣವು ಅಂತರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲದ ಕೊಂಡಿಯಾಗಿರಬಹುದೇ ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

error: Content is protected !!