ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದ್ದು, ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಈಗಾಗಲೇ ಇರುವ ಝಡ್ ಭದ್ರತೆ ಜತೆಗೆ ಬುಲೆಟ್ ಪ್ರೂಫ್ ಕಾರು ಕೂಡ ಸರ್ಕಾರ ಒದಗಿಸಲಿದೆ. ದೆಹಲಿಯಲ್ಲಿರುವ ಅವರ ನಿವಾಸದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಹೆಚ್ಚಿಸಲಾಗಿದೆ. ಎಸ್ ಜೈಶಂಕರ್ ಅವರಿಗೆ ಈಗಾಗಲೇ ಗೃಹ ಸಚಿವಾಲಯವು Z ವರ್ಗದ ಭದ್ರತೆಯನ್ನು ಒದಗಿಸಿದೆ.
ವಿದೇಶಾಂಗ ಸಚಿವರಿಗೆ ಸಿಆರ್‌ಪಿಎಫ್ ಕಮಾಂಡೋಗಳು ಭದ್ರತೆ ಒದಗಿಸುತ್ತಾರೆ. ಇದರಲ್ಲಿ, 33 ಕಮಾಂಡೋಗಳು ಅವರ ಸುತ್ತಮುತ್ತಲಿರುತ್ತಾರೆ. ಅಕ್ಟೋಬರ್ 2023 ರಲ್ಲಿ ಅವರ ಭದ್ರತೆಯನ್ನು Y-ವರ್ಗದಿಂದ Z-ವರ್ಗಕ್ಕೆ ಭದ್ರತೆ ಹೆಚ್ಚಿಸಲಾಗಿತ್ತು.