ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಭದ್ರತಾ ಲೋಪ ಆಗಿದೆ. ಅಭಿಮಾನಿ ಎಂದು ಹೇಳಿಕೊಂಡು ಮನೆಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಇಬ್ಬರನ್ನು ಮುಂಬೈ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.
ಸಲ್ಮಾನ್ ಖಾನ್ ಅವರನ್ನು ಭೇಟಿ ಮಾಡುವ ಸಲುವಾಗಿ ಅಪಾರ್ಟ್ಮೆಂಟ್‌ಗೆ ನುಗ್ಗಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಸದ್ಯಕ್ಕೆ ಬಾಂದ್ರಾ ಪೊಲೀಸರು ಹೆಚ್ಚಿನ ವಿಚಾರಣೆ ಮಾಡುತ್ತಿದ್ದಾರೆ. ಈ ಘಟನೆ ಬಳಿಕ ಸಲ್ಮಾನ್ ಖಾನ್ ಮನೆ ಬಳಿ ಭದ್ರತೆ ಹೆಚ್ಚಿಸಲಾಗಿದೆ.
ಈ ಘಟನೆ ನಡೆದಿರುವುದು ಮೇ 20ರ ಸಂಜೆ 7.15ರ ಸುಮಾರಿಗೆ. ಸಲ್ಮಾನ್ ಖಾನ್ ಅವರ ಅಪಾರ್ಟ್ಮೆಂಟ್‌ಗೆ ನುಗ್ಗಿರುವ ವ್ಯಕ್ತಿಯನ್ನು 23 ವರ್ಷದ ಜಿತೇಂದ್ರ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಛತ್ತಿಸ್ಗಡ ಮೂಲದವನು. ಆತನ ವಿರುದ್ಧ ದೂರು ದಾಖಲು ಮಾಡಲಾಗಿದೆ.
ಮತ್ತೊಂದೆಡೆ ಸಲ್ಮಾನ್ ಖಾನ್ ಅಭಿಮಾನಿ ಎಂದು ನಟನ ಗ್ಯಾಲಕ್ಸಿ ಅಪಾರ್ಟ್ಮೆಂಟ್‌ಗೆ ಇಶಾ ಚಾಬ್ರಾ ಎಂಬ ಮಹಿಳೆ ಕೂಡ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಮೇ 19 ಇಶಾ ಚಾಬ್ರಾ ಮನೆಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದ ಮತ್ತೋರ್ವ ಮಹಿಳಾ ಅಭಿಮಾನಿ ಇಶಾ ಚಾಬ್ರಾರನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಸಿಸಿಟಿವಿಯಲ್ಲಿ ಆಕೆ ಮುಖ ಬಹಿರಂಗವಾಗಿದೆ.