ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವಿನ ಹೆಸರು ಕೇಳಿದರೆ ಸಾಕು ನಡುಗುವವರೇ ಹೆಚ್ಚು. ಅವುಗಳಲ್ಲಿ ಕೆಲವು ವಿಷಪೂರಿತವಾಗಿದ್ದರೆ, ಕೆಲವು ಅಪಾಯಕಾರಿ ಅಲ್ಲ. ಹಾವೆಂದರೆ ವಿಷ ಎನ್ನೋದು ಎಲ್ಲರ ಮನದಲ್ಲಿ ಆಳವಾಗಿ ಬೇರೂರಿದೆ. ಆದ್ದರಿಂದಲೇ ಅನೇಕರಿಗೆ ಹಾವುಗಳೆಂದರೆ ಭಯ. ಆದರೆ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಹಾವನ್ನು ಹಿಡಿದಿರುವ ರೀತಿ ನೋಡಿದ್ರೆ ಖಂಡಿತ ಮೈ ರೋಮಾಂಚನವಾಗುತ್ತೆ.
ಈ ವೀಡಿಯೊದಲ್ಲಿ, ಮಹಿಳೆಯೊಬ್ಬರು ಮೇಲಕ್ಕೆ ಹತ್ತಿ ಸೀಲಿಂಗ್ ಬಾಕ್ಸ್‌ಗೆ ಕೋಲನ್ನು ಹಾಕುತ್ತಾರೆ. ಅಷ್ಟರಲ್ಲೇ ಒಳಗಿದ್ದ 6-7 ಅಡಿ ಹಾವು ಸ್ವಲ್ಪಮಟ್ಟಿಗೆ ಹೊರಬಂದು…ಕೈಗೆ ಸುತ್ತಿಕೊಳ್ಳುತ್ತದೆ. ಒಂದಲ್ಲ ಎರಡು ಹಾವನ್ನು ಇದೇ ರೀತಿ ಯಾವುದೇ ಭಯವಿಲ್ಲದೆ ಧೈರ್ಯದಿಂದ ಹಿಡಿದಿದ್ದಾರೆ.
ವೀಡಿಯೊವನ್ನು ಆಗಸ್ಟ್ 17 ರಂದು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಮಹಿಳೆಯ ಧೈರ್ಯಕ್ಕೆ ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ.
Just another normal day in Australiao90 pic.twitter.com/SUCNeltwdW
— Insane Reality Leaks (@InsaneRealitys) August 17, 2023