ನಿತ್ಯವೂ ಹೊಕ್ಕುಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡೋದ್ರಿಂದ ಸಿಕ್ಕಾಪಟ್ಟೆ ಲಾಭ ಇದೆ, ತಲೆಗೆ ಹಚ್ಚೋದು ಕೇಳಿದ್ದೀರಿ ಬಟ್ ಹೊಕ್ಕಳಿಗೆ ಹಚ್ಚಿದ್ರೆ ಏನು ಲಾಭ? ಮುಂದೆ ಓದುತ್ತಾ ತಿಳಿದುಕೊಳ್ಳಿ..
ಹೊಕ್ಕುಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಂಡರೆ, ಋತುಚಕ್ರದ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಟ್ಟೆ ನೋವು, ಸೆಳೆತ ಮತ್ತು ಇತರ ಸಮಸ್ಯೆಗಳು ಕಡಿಮೆಯಾಗುತ್ತವೆ. ಎಣ್ಣೆ ಹಚ್ಚುವುದರಿಂದ ಹೊಟ್ಟೆಯ ಸ್ನಾಯುಗಳು ಸಡಿಲಗೊಳ್ಳುತ್ತವೆ. ಇದರೊಂದಿಗೆ ಋತುಚಕ್ರದ ಸಮಯದಲ್ಲಿ ಸಮಸ್ಯೆಗಳು ಕಡಿಮೆಯಾಗುತ್ತವೆ.
ಹೊಟ್ಟೆಯ ಮೇಲೆ ಹರಳೆಣ್ಣೆ ಅಥವಾ ಕ್ಯಾಸ್ಟರ್ ಆಯಿಲ್ ಅನ್ನು ಮಸಾಜ್ ಮಾಡುವುದರಿಂದ ನರಮಂಡಲವು ಸಡಿಲಗೊಳ್ಳುತ್ತದೆ. ಒತ್ತಡ, ಆತಂಕ ಹಾಗೂ ಆಯಾಸ ಕಡಿಮೆಯಾಗಲು ಸಾಧ್ಯವಾಗುತ್ತದೆ. ನೀವು ಇದನ್ನು ನಿಯಮಿತವಾಗಿ ಹಚ್ಚಿದರೆ ಹೆಚ್ಚು ನಿರಾಳರಾಗುತ್ತೀರಿ.
ಹೊಕ್ಕುಳನ್ನು ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಉಬ್ಬುವುದು, ಮಲಬದ್ಧತೆ ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಹೊಕ್ಕುಳಿನ ಮೇಲೆ ಎಣ್ಣೆ ಮಸಾಜ್ ಮಾಡುವುದರಿಂದ ಇವೆಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯವಾಗುತ್ತದೆ.
ಹರಳೆಣ್ಣೆ ಹಚ್ಚುವುದರಿಂದ ಕೂದಲು ಬೆಳೆಯುತ್ತವೆ. ಹೊಕ್ಕುಳಕ್ಕೆ ಹಚ್ಚುವುದರಿಂದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ. ತಲೆಯಲ್ಲಿ ರಕ್ತದ ಪರಿಚಲನೆ ಹೆಚ್ಚಾಗುತ್ತದೆ. ಕೂದಲನ್ನು ಆರೋಗ್ಯಕರವಾಗಿಸುತ್ತದೆ, ಕೂದಲು ದಪ್ಪವಾಗಿ ಬೆಳೆಯುತ್ತದೆ. ಹೊಕ್ಕುಳ ಮೇಲೆ ಕ್ಯಾಸ್ಟರ್ ಆಯಿಲ್ ಮಸಾಜ್ ಮಾಡುವುದರಿಂದ ಚರ್ಮವು ಹೈಡ್ರೇಟ್ ಆಗುತ್ತದೆ.