ಹೊಸದಿಗಂತ ವರದಿ,ಕಲಬುರಗಿ:
ಮಾರ್ಚ್ 14 ರಿಂದ 17ರ,ವರೆಗೆ ಹರಿಯಾಣದ ಕುರುಕ್ಷೇತ್ರ ಯುನಿವರ್ಸಿಟಿಯಲ್ಲಿ ನಡೆಯುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕರಾಟೆ ಚಾಂಪಿಯನ್ಶಿಪ್ನಲ್ಲಿ ಬಿಜಾಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮಹಿಳಾ ಕರಾಟೆ ತಂಡಕ್ಕೆ ಕಲಬುರಗಿ,ಯ ಕಲ್ಯಾಣ ಕರ್ನಾಟಕದ ಭಾಗದ ಹೆಸರಾಂತ ಅಂತರಾಷ್ಟ್ರೀಯ ಕರಾಟೆಪಟು ನ್ಯಾಷನಲ್ ಕಿಕ್ಬಾಕ್ಸಿಂಗ್ ಚಾಂಪಿಯನ್ ರಾಜ್ಯ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಕಲಬುರಗಿ ಜಿಲ್ಲೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತು ಕರ್ನಾಟಕ,ಕ್ಕೆ ಹೆಸರು ತಂದುಕೊಟ್ಟಂತಹ ಮನೋಹರಕುಮಾರ ಬೀರನೂರ ರವರನ್ನು ಆಯ್ಕೆಯಾಗಿರುವುದು ಕಲಬುರಗಿ ಜಿಲ್ಲೆಗೆ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಹರ್ಷದ ವಿಷಯವಾಗಿದೆ.
ಹೀಗಾಗಿ ಹೆವೆನ್ ಫೈಟರ್ಸ್ ಯೂಥ್ ಸ್ಪೋಟ್ರ್ಸ್ ಅಸೋಸಿಯೇಷನ್ ಇಂಡಿಯಾ ಸಂಸ್ಥೆಯ ಪದಾಧಿಕಾರಿಗಳು, ರಾಜಕೀಯ ಮುಖಂಡರು, ಅಧಿಕಾರಿವರ್ಗದವರು, ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ