ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪೊಲೀಸ್ ಇಲಾಖೆಯಲ್ಲಿ ಉತ್ತಮ ತನಿಖಾ ಕೌಶಲ್ಯಕ್ಕಾಗಿ ಕೇಂದ್ರ ಗೃಹಮಂತ್ರಿ ಪದಕಕ್ಕೆ ಕರ್ನಾಟಕದ ಆರು ಪೊಲೀಸ್ ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
2022ನೇ ಸಾಲಿನ ಪದಕಕ್ಕೆ ದೇಶಾದ್ಯಂತ ಸಿವಿಲ್ ಪೊಲೀಸ್, ಸಿಬಿಐ, ಎನ್.ಸಿ.ಬಿ ಸೇರಿದಂತೆ 151 ಅಧಿಕಾರಿಗಳು ಈ ಮನ್ನಣೆಗೆ ಪಾತ್ರರಾಗಿದ್ದಾರೆ.
ಕರ್ನಾಟಕದಿಂದ ಲೋಕಾಯುಕ್ತ ಎಸ್.ಪಿಯಾಗಿರುವ ಕೆ.ಲಕ್ಷ್ಮಿ ಗಣೇಶ್, ಹುಬ್ಬಳ್ಳಿಯ ಹೆಸ್ಕಾಂ ಎಸ್.ಪಿ ಶಂಕರ್.ಕೆ.ಮರಿಹಾಳ್, ರಾಯಚೂರಿನ ಸಿಂಧನೂರು ಉಪ ವಿಭಾಗದ ಡಿವೈಎಸ್ಪಿ ವೆಂಕಟಪ್ಪ ನಾಯ್ಕ, ಕರ್ನಾಟಕ ಲೋಕಾಯುಕ್ತ ಎಸ್.ಪಿ ಎಂ.ಆರ್.ಗೌತಮ್, ಸಿಐಡಿ, ಕಲಬುರಗಿ ಘಟಕದ ಎಸ್.ಪಿ ಶಂಕರೇಗೌಡ ಪಾಟೀಲ್ ಹಾಗೂ ದಾವಣಗೆರೆಯ ಬಸವನಗರ ಠಾಣೆಯ ಇನ್​ಸ್ಪೆಕ್ಟರ್ ಎಚ್.ಗುರುಬಸವರಾಜ್ ಅವರಿಗೆ ಗೌರವ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!