ಹಿರಿಯ ಪತ್ರಕರ್ತ ಬಿ.ಹೊನ್ನಪ್ಪ ನಿಧನ

ಹೊಸದಿಗಂತ ವರದಿ ಅಂಕೋಲಾ:

ಹಿರಿಯ ಪತ್ರಕರ್ತ, ಜಾನಪದ ಹಾಡುಗಾರ ಭಾವಿಕೇರಿ ನಿವಾಸಿ ಬಿ.ಹೊನ್ನಪ್ಪ (86) ಅವರು ನಿಧನರಾದರು.
ನುಡಿಜೇನು ವಾರಪತ್ರಿಕೆಯ ಸಂಪಾದಕರಾಗಿ ಹಲವಾರು ವರ್ಷಗಳ ಕಾಲ ಪತ್ರಿಕೆಯನ್ನು ಸಮರ್ಥವಾಗಿ ನಿರ್ವಹಿಸಿದ ಅವರು ತಮ್ಮ ವಿಶೇಷ ಲೇಖನ ಮತ್ತು ಸಂಪಾದಕೀಯ ಬರಹಗಳಿಂದ ಗುರುತಿಸಿಕೊಂಡಿದ್ದರು.

ಸುಮಾರು ಎರಡು ದಶಕಗಳ ಹಿಂದೆಯೇ ಅಂಕೋಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ಯುವ ಪತ್ರಕರ್ತರಿಗೆ ಮಾರ್ಗದರ್ಶನ ಮಾಡುತ್ತಿದ್ದ ಅವರು ಒಬ್ಬ ಜಾನಪದ ಕಲಾವಿದರಾಗಿ ರಾಜ್ಯ ಮತ್ತು ದೇಶದ ವಿವಿಧ ಭಾಗಗಳಲ್ಲಿ ತಮ್ಮ ಹಾಡುಗಾರಿಕೆ ಮೂಲಕ ಗುರುತಿಸಿಕೊಂಡಿದ್ದ ಹೊನ್ನಪ್ಪ ಅವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ತಮ್ಮ ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಅಪಾರ ಜನರ ಪ್ರೀತಿ ಅಭಿಮಾನಗಳಿಗೆ ಪಾತ್ರರಾಗಿದ್ದ ಬಿ.ಹೊನ್ನಪ್ಪ ಅವರ ಮನೆಗೆ ಅನೇಕ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!