ಹೊಸದಿಗಂತ ವರದಿ, ಪುತ್ತೂರು:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಪುತ್ತೂರು ಬೆದ್ರಾಳ ನಿವಾಸಿ ಧನಂಜಯ ವಾಗ್ಲೆ (75) ಅವರು ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೂಲತಃ ಸುಳ್ಯದ ಕೋಡಿಯಾಲಬೈಲಿನ ಸ್ವಯಂಸೇವಕರಾಗಿದ್ದರು. ಸುಳ್ಯ ತಾಲೂಕಿನಲ್ಲಿ ಜನಸಂಘ ಹಾಗು ಬಿಜೆಪಿಯನ್ನು ಕಟ್ಟಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಸುಮಾರು 20 ವರ್ಷಗಳ ಕಾಲ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತರಂತೆ ಕಾರ್ಯ ನಿರ್ವಹಿಸಿದ್ದರು.
ತುರ್ತು ಪರಿಸ್ಥಿತಿ, ಅಯೋಧ್ಯೆಯ ರಾಮ ಜನ್ಮಭೂಮಿ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ವಾಗ್ಲೆಯವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಸೇವಾ ಪ್ರಮುಖ್ ನ. ಸೀತಾರಾಮ, ಪುತ್ತೂರು ಜಿಲ್ಲಾ ಸಹ ವ್ಯವಸ್ಥಾ ಪ್ರಮುಖ್ ರಮೇಶ್ ನೆಗಳಗುಳಿ, ಜಿಲ್ಲಾ ಸಹ ಬೌದ್ಧಿಕ ಪ್ರಮುಖ್ ಸುಬ್ರಾಯ ಪುಣಚ, ಪುತ್ತೂರು ನಗರ ಕಾರ್ಯವಾಹ ರಾಜೇಶ್ ಟಿ., ಸಹ ಕಾರ್ಯವಾಹ ಭರತ್ ರಾಜ್,
ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಕುಸುಮಾಧರ ಎ.ಟಿ., ಸುಳ್ಯ ಸಿ.ಎ. ಬ್ಯಾಂಕ್ ಕಾರ್ಯ ನಿರ್ವಾಹಣಾಧಿಕಾರಿ ಸುದರ್ಶನ ಸುರ್ತಿಲ, ವಿಧಾನ ಪರಿಷತ್ ಮಾಜಿ ಸದಸ್ಯ ವಿನಯ ಚಂದ್ರ ಹಾಗೂ ಬಿಜೆಪಿ ಹಾಗು ಹಿಂದು ಸಂಘಟನೆಗಳ ಪ್ರಮುಖರು ಸಂತಾಪ ಸೂಚಿಸಿದ್ದಾರೆ.