ಹೊಸದಿಗಂತ ವರದಿ, ಹುಬ್ಬಳ್ಳಿ:
ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕರಾಗಿದ್ದ ಆರೆಸ್ಸೆಸ್ ಸಂಘದ ಕಾರ್ಯಕರ್ತ ಪ. ರಾ . ನಾಗರಾಜ್ ಭಟ್ (62) ಮಂಗಳವಾರ ಮಧ್ಯಾಹ್ನ ೧೨.೪೫ ಕ್ಕೆ ಹುಬ್ಬಳ್ಳಿಯ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ .
ಮೂಲತಃ ಅಥಣಿ ತಾಲೂಕಿನವರಾದ ಇವರು ಸಂಘದ ನಿಷ್ಟಾವಂತ ಕಾರ್ಯಕರ್ತರಾಗಿ ವಿವಿಧ ಸ್ಥರದ ಜವಾಬ್ದಾರಿ ಹೊಂದಿದ್ದರು.12 ವರ್ಷಗಳ ಕಾಲ ಪ್ರಚಾರಕರಾಗಿ ವಿಭಾಗ, ಪ್ರಾಂತ ಸ್ತರದಲ್ಲಿ ಸಂಘದ ಜವಾಬ್ದಾರಿ ನಿರ್ವಹಿಸಿದ್ದರು. ಪತ್ನಿ ಹಾಗೂ, 2 ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಬಿಟ್ಟಗಲಿದ್ದಾರೆ.
ಕುಟುಂಬ ಪ್ರಬೋಧನ ಗತಿವಿಧಿಗೆ ನಮ್ಮ ಪ್ರಾಂತದಲ್ಲಿ ಹೊಸ ದಿಕ್ಕನ್ನು ನೀಡಿ ಮಾದರಿ ಗತಿವಿಧಿಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಇವರು ಕೆಲ ಕಾಲದಿಂದ ಕ್ಯಾನ್ಸರ್ ನಿಂದ ಕೆಲವು ತಿಂಗಳುಗಳಿಂದ ಬಳಲುತ್ತಿದ್ದರು.
ಇವರ ನಿಧನಕ್ಕೆ ರಾ ಸ್ವ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕ ಬಸವರಾಜ ಡಂಬಳ ಮತ್ತು ಹಿರಿಯ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
ಇವರ ಅಂತ್ಯವಿಧಿಯು ಹುಬ್ಬಳ್ಳಿ ಗೋಕುಲ ರಸ್ತೆಯ ಕೋಟಿಲಿಂಗ ನಗರದಲ್ಲಿ ಮಂಗಳವಾರ ಸಂಜೆ ಜರುಗಿತು.