ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಲೆಯಲ್ಲಿ ಜಗಳ ನಡೆಯುವ ವೇಳೆ ಸಹಪಾಠಿಯಿಂದ ಚೂರಿ ಇರಿತಕ್ಕೆ ಒಳಗಾದ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಅಹಮದಾಬಾದ್ನ ಸೆವೆಂತ್-ಡೇ ಅಡ್ವೆಂಟಿಸ್ಟ್ ಶಾಲೆಯಲ್ಲಿ ಮಂಗಳವಾರ 8ನೇ ತರಗತಿಯ ವಿದ್ಯಾರ್ಥಿ ಜೊತೆ 10ನೇ ತರಗತಿಯ ವಿದ್ಯಾರ್ಥಿಗೆ ಜಗಳ ನಡೆದಿತ್ತು. ಈ ವೇಳೆ 8ನೇ ತರಗತಿ ವಿದ್ಯಾರ್ಥಿ ಹಿರಿಯ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿದ್ದ.
ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಈ ವಿಚಾರ ತಿಳಿದು ಮಕ್ಕಳ ಪೋಷಕರು ಶಾಲೆಗೆ ನುಗ್ಗಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಬಾಲಕ ಕುಟುಂಬಸ್ಥರು, ಸಿಂಧಿ ಸಮುದಾಯದ ಸದಸ್ಯರು ಮತ್ತು ಇತರ ಪೋಷಕರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಕೊಲೆ ಮಾಡಿದ ಬಾಲಕ ಮುಸ್ಲಿಮ್ ಧರ್ಮಕ್ಕೆ ಸೇರಿದ್ದರೆ ಕೊಲೆಯಾದ ವಿದ್ಯಾರ್ಥಿ ಹಿಂದೂ ಧರ್ಮಕ್ಕೆ ಸೇರಿದ್ದರಿಂದ ಪ್ರತಿಭಟನೆ ಜೋರಾಗಿದೆ. ಪ್ರತಿಭಟನಾಕಾರರು ಶಾಲೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಈಗ ಪೋಷಕರ ಜೊತೆ ಹಿಂದೂ ಸಂಘಟನೆಗಳು ಶಾಲೆಯ ಪ್ರಿನ್ಸಿಪಾಲ್ ಮತ್ತು ಆಡಳಿತ ಮಂಡಳಿಯ ವಿರುದ್ಧ ದೂರು ನೀಡಿವೆ.
#WATCH | Gujarat: A class 8 student was stabbed and injured by a student of class 10 in Seventh-Day Adventist school, Ahmedabad, yesterday.
Visuals from the school as people, including the injured child’s relatives, create ruckus here. pic.twitter.com/A1jHkTcZFd
— ANI (@ANI) August 20, 2025